ನವಿ ಮುಂಬೈ : ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಭಾನುವಾರ, ಅಂದ್ರೆ ನಾಳೆ ನವಿ ಮುಂಬೈನಲ್ಲಿ ಚೊಚ್ಚಲ ಕಪ್ ಗೆಲ್ಲುವ ಇರಾದೆಯೊಂದಿಗೆ ಬಲಿಷ್ಠ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೆಣಸಾಡಲಿದೆ.
ಕಪಿಲ್ ದೇವ್ ನಾಯಕತ್ವದ ಭಾರತ ತಂಡವು 1983ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಗೆದ್ದು ಇತಿಹಾಸ ರಚಿಸಿತ್ತು. ಇದೀಗ ಮಹಿಳಾ ಕ್ರಿಕೆಟ್‌ನಲ್ಲಿ ಅಂತಹದೊದು ಐತಿಹಾಸಿಕ ಸಾಧನೆಯನ್ನು ಮಾಡಲು ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಭಾರತ ತಂಡವು ತುದಿಗಾಲಿನಲ್ಲಿ ನಿಂತಿದೆ.

ನಾಳೆ ನವಿ ಮುಂಬೈನ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಕಿರೀಟ ಧರಿಸುವ ಛಲದಲ್ಲಿ ಭಾರತವಿದೆ. ದಕ್ಷಿಣ ಆಫ್ರಿಕಾ ತಂಡ ಕೂಡ ಇದುವರೆಗೆ ವಿಶ್ವಕಪ್ ಗೆದ್ದಿಲ್ಲ. ಅದ್ದರಿಂದ ಲಾರಾ ವೊಲ್ವಾರ್ಟ್ ಬಳಗವೂ ಕೂಡ ಇತಿಹಾಸ ಬರೆಯುವತ್ತ ತಂತ್ರ ರೂಪಿಸುತ್ತಿದೆ. ಅದರಿಂದಾಗಿಯೇ 13ನೇ ವಿಶ್ವಕಪ್ ಫೈನಲ್ ಕ್ರಿಕೆಟ್ ಪ್ರೇಮಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಇನ್ನು, ನಾಳೆ ಪಂದ್ಯ ಮಧ್ಯಾಹ್ನ ಮೂರು ಗಂಟೆಗೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಲೈವ್ ನೋಡಬಹುದು, ಹಾಗೆಯೇ ಮೊಬೈಲ್‌ನಲ್ಲಿ ಜಿಯೋಹಾಟ್‌ಸ್ಟಾರ್ ಆಪ್‌ನಲ್ಲಿ ಉಚಿತವಾಗಿ ಪಂದ್ಯದ ನೇರಪ್ರಸಾರ ಇರಲಿದೆ.
ವಿನ್ನರ್ ಮತ್ತು ರನ್ನರ್ ಅಪ್ ತಂಡಕ್ಕೆ ಸಿಗುವ ಬಹುಮಾನ ಮೊತ್ತ ಎಷ್ಟು ಗೊತ್ತಾ?
ಪಂದ್ಯದಲ್ಲಿ ಚಾಂಪಿಯನ್ ತಂಡ 37.3 ಕೋಟಿ ರೂ.ಗಳನ್ನು ಪಡೆಯಲಿದ್ದು, ರನ್ನರ್ ಅಪ್ ತಂಡವು 20 ಕೋಟಿ ರೂ.ಗಳನ್ನು ಪಡೆಯಲಿದೆ. ಸೆಮಿಫೈನಲ್‌ನಲ್ಲಿ ಸೋತ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ತಲಾ ₹9.89 ಕೋಟಿ ಮೊತ್ತವನ್ನು ತಮ್ಮದಾಗಿಸಿಕೊಳ್ಳಲಿವೆ.
ಇದನ್ನೂ ಓದಿ : ‘ಕಲರ್ಸ್ ಕನ್ನಡ’ದ ಇನ್‌ಸ್ಟಾಗ್ರಾಂ, ಫೇಸ್ಬುಕ್ ಪೇಜ್ ದಿಢೀರ್ ಕಣ್ಮರೆ | ನೆಟ್ಟಿಗರು ಶಾಕ್.. ಆಗಿದ್ದೇನು?


















