ನವದೆಹಲಿ : ಹಾಲಿ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ದಬಾಂಗ್ ಡೆಲ್ಲಿ ಮತ್ತು ಪುಣೇರಿ ಪಲ್ಟನ್ ತಂಡಗಳು ಇಂದು ದೆಹಲಿಯ ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರೊ ಕಬಡ್ಡಿ ಲೀಗ್‌ನ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿವೆ.
ಲೀಗ್ ಹಂತದಲ್ಲಿ ಮೊದಲೆರಡು ಸ್ಥಾನ ಪಡೆದ ಪುಣೇರಿ ಮತ್ತು ಡೆಲ್ಲಿ ತಂಡಗಳು ಪ್ಲೇಆಫ್ ಹಂತದಲ್ಲೂ ಉತ್ತಮ ಪ್ರದರ್ಶನ ನೀಡಿ ನಿರೀಕ್ಷೆಯಂತೆ ಪ್ರಶಸ್ತಿ ಸುತ್ತು ಪ್ರವೇಶಿಸಿದೆ. ಕಳೆದ 11 ಆವೃತ್ತಿಗಳಲ್ಲಿ ತಲಾ ಒಂದೊಂದು ಬಾರಿ ಚಾಂಪಿಯನ್ ಆಗಿರುವ ಉಭಯ ತಂಡಗಳು, ಇದೀಗ ಎರಡನೇ ಬಾರಿ ಕಿರೀಟ ಮುಡಿಗೇರಿಸಿಕೊಳ್ಳುವ ಇರಾದೆಯಲ್ಲಿದೆ.
2023ರ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿರುವ ಪುಣೇರಿ ಮತ್ತು 2021-22ರ ಚಾಂಪಿಯನ್ ಡೆಲ್ಲಿ ತಂಡಗಳು ಹಾಲಿ ಆವೃತ್ತಿಯಲ್ಲಿ ಮೂರು ಬಾರಿ ಮುಖಾಮುಖಿಯಾಗಿವೆ. ವಿಶೇಷವೆಂದರೆ ಮೂರೂ ಬಾರಿಯು ನಿಗದಿತ ಅವಧಿಯಲ್ಲಿ ಪಂದ್ಯಗಳು ಟೈ ಆಗಿದ್ದವು. ಟೈಬ್ರೇಕರ್ ಮತ್ತು ಗೋಲ್ಡನ್ ರೇಡ್‌ನಲ್ಲಿ ಫಲಿತಾಂಶ ನಿರ್ಧಾರವಾಗಿತ್ತು ಇದೀಗ ನಾಲ್ಕನೇ ಬಾರಿ ಮುಖಾಮುಖಿಗೆ ವೇದಿಕೆ ಸಜ್ಜಾಗಿದೆ.
ಪ್ರಸಾರ | ಪಿಕೆಎಲ್ 2025ರ ಫೈನಲ್ ಪಂದ್ಯ ಇಂದು ರಾತ್ರಿ 8 ಗಂಟೆಗೆ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ. ಹಾಗೆಯೇ ಜಿಯೋಹಾಟ್‌ಸ್ಟಾರ್‌ನಲ್ಲಿಯೂ ನೇರ ಪ್ರಸಾರ ಇರಲಿದೆ.
ಇದನ್ನೂ ಓದಿ : ರಸ್ತೆ ಗುಂಡಿಗಳನ್ನು ಮುಚ್ಚಲು ನೀಡಿದ್ದ ಗಡುವು ಮುಗಿದಿದೆ.. ನೆನಪಿದೆಯೇ? – ಸಿದ್ದು, ಡಿಕೆಶಿಗೆ ಆರ್.ಅಶೋಕ್ ಪ್ರಶ್ನೆ



















