ಮೈಸೂರು: ಸಿಎಂ ಸಿದ್ದರಾಮಯ್ಯ ಪತ್ನಿಯೇ ಮುಡಾ ಕಚೇರಿಗೆ ಬಂದು ಸೈಟ್ ಮರಳಿ ಕೊಡುವುದಾಗಿ ಹೇಳಿದ್ದರು. ಈಗ ಸೈಟ್ ಗಳು ಮುಡಾ ಪಾಲಾಗಿವೆ. ಇಂದು ಮುಡಾಗೆ 14 ನಿವೇಶನ ಹಿಂದಿರುಗಿಸುವ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿದಿದೆ.
ಪಾರ್ವತಿ ಸಿದ್ದರಾಮಯ್ಯ ಅವರಿಂದ ಮುಡಾ ಪ್ರತಿ ಸೈಟ್ ಗೆ 1 ಸಾವಿರ ರೂ. ಅಂದರೆ ಒಟ್ಟು 14 ಸಾವಿರ ರೂ. ಪಡೆದು ಮರಳಿ ಪಡೆಯಲಾಗಿದೆ. ಈಗ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಹೆಸರಿಗೆ ಸೈಟ್ ವರ್ಗಾವಣೆ ಮಾಡಲಾಗಿದೆ.
ಪಾರ್ವತಿ ಅವರಿಂದ 14 ನಿವೇಶನ ಮರಳಿ ಬಂದ ಬೆನ್ನಲ್ಲೇ 14 ಸೈಟ್ ಗಳು ಕುರಿತಂತೆ ಸಿಎಂ ವಿರುದ್ಧ ಸಾಕ್ಷ್ಯ ನಾಶದ ಆರೋಪ ಕೇಳಿ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ಬಂಧಿಸಬೇಕೆಂದು ದೂರುದಾರಲ್ಲೊಬ್ಬರಾದ ಪ್ರದೀಪ್ ಕುಮಾರ್ ಮನವಿ ಮಾಡಿದ್ದಾರೆ
ಮುಡಾ ಆಯುಕ್ತರು ಪಾರ್ವತಿ ಮನೆಗೆ ಹೋಗಿ ಸೈಟ್ ವಾಪಸ್ ಪ್ರತಿಗೆ ಸಹಿ ಮಾಡಿಸಿಕೊಂಡು ಬಂದಿದ್ದಾರೆ. ಅಧಿಕಾರಿಗಳು ಆರೋಪಿಗಳ ಜೊತೆಗೆ ಸಾಕ್ಷಿ ನಾಶಕ್ಕೆ ಕೈಜೋಡಿಸಿದ್ದಾರೆ. ಹೀಗಾಗಿ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ್ದಾರೆ.