ಧಾರವಾಡ: ಅತ್ತಿಗೆ ಅಂದರೆ ತಾಯಿ ಸಮಾನ ಅಂತಾರೆ. ಆದರೆ, ಇಲ್ಲೊಬ್ಬ ಪಾಪಿ ಅತ್ತಿಗೆಯ ಮೇಲೆ ಕಣ್ಣು ಹಾಕಿ ಎಲ್ಲೆಂದರಲ್ಲಿ ಕಚ್ಚಿ ಗಾಯಗೊಳಿಸಿರುವ ಘಟನೆಯೊಂದು ನಡೆದಿದೆ.
ಧಾರವಾಡ (Dharwad) ಜಿಲ್ಲೆಯ ಕುಂದಗೋಳ ತಾಲೂಕಿನ ಹೊಸಕಟ್ಟಿ ಗ್ರಾಮದಲ್ಲಿ ಇಂತಹೊಂದು ಘಟನೆ ನಡೆದಿದೆ. ರಮೇಶ್ ಮೇಗುಂಡಿ ಇಂತಹ ಕೃತ್ಯ ಎಸಗಿದ ಕಾಮುಕ ಎನ್ನಲಾಗಿದೆ. ಈ ಪಾಪಿ ಸ್ವಂತ ಅತ್ತಿಗೆಯನ್ನೇ ಮಂಚಕ್ಕೆ ಕರೆದಿದ್ದಾನೆ. ಆದರೆ, ಅತ್ತಿಗೆ ಸವಿತಾ ಬಸಪ್ಪ ಅದಕ್ಕೆ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ರಮೇಶ್, ಅತ್ತಿಗೆಯನ್ನು ಹಿಡಿದುಕೊಂಡು ಎಲ್ಲೆಂದರಲ್ಲಿ ಕಚ್ಚಿದ್ದಾನೆ. ಮುಖ, ಎದೆ ಭಾಗ, ಗಲ್ಲಕ್ಕೆ ಕಚ್ಚಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆತನಿಂದ ಹೇಗೋ ತಪ್ಪಿಸಿಕೊಂಡ ಅತ್ತಿಗೆ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಕೂಡಲೇ ಸ್ಥಳೀಯರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾಮುಕ ಮೈದುನ ಪರಾರಿಯಾಗಿದ್ದಾನೆ. ಕಾಮುಕ ರಮೇಶ್, ಅತ್ತಿಗೆಯನ್ನು ನಿತ್ಯವೂ ಮಂಚಕ್ಕೆ ಕರೆಯುತ್ತಿದ್ದ ಎನ್ನಲಾಗಿದೆ. ಆದರೆ, ಅತ್ತಿಗೆ ಇದಕ್ಕೆ ನಿರಾಕರಿಸುತ್ತಲೇ ಬಂದಿದ್ದಾರೆ. ಭಾನುವಾರ ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮತ್ತೆ ಸವಿತಾರನ್ನು ಕರೆದಿದ್ದಾನೆ. ಒಪ್ಪದಿದ್ದಾಗ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಸದ್ಯ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.