ಯಾದಗಿರಿ: ತನ್ನ ಪತ್ನಿ ಪರ ಪುರುಷನೊಂದಿಗೆ ಮಾತನಾಡಿದ್ದನ್ನು ನೋಡಿದರೆ ಸಾಕು ಹಲವರಿಗೆ ಬೆಂಕಿ ಬಿದ್ದ ಹಾಗೆ ಆಗುತ್ತದೆ. ಆದರೆ, ಇಲ್ಲೊಬ್ಬ ಪಾಪಿ ತಾನು ಪಡೆದ ಸಾಲ ತೀರಿಸುವುದಕ್ಕಾಗಿ ಪರ ಪುರುಷನ ಜೊತೆ ಮಲಗಲು ಪತ್ನಿಗೆ ಹೇಳಿದ್ದಾನೆ. ಇದಕ್ಕೆ ಒಪ್ಪದ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಅಮಾನವೀಯ ಘಟನೆ ಟನೆ ಯಾದಗಿರಿ (Yadagiri) ಜಿಲ್ಲೆ ಶಹಾಪುರ ತಾಲೂಕಿನ ಗಂಗನಾಳ ಗ್ರಾಮದಲ್ಲಿ ನಡೆದಿದೆ. ಆರೋಪಿ ಪತಿ ಭೀಮಣ್ಣ ಉಸಿರುಗಟ್ಟಿಸಿ ತನ್ನ ಪತ್ನಿ ಶರಣಬಸಮ್ಮ ಎಂಬುವವರನ್ನು ಹತ್ಯೆ ಮಾಡಿದ್ದಾನೆ. ಕೊಲೆಯಾಗುತ್ತಿದ್ದಂತೆ ಹೃದಯಾಘಾತ ಎಂದು ಬಿಂಬಿಸಲು ಯತ್ನಿಸಿದ್ದಾನೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪತಿ ಭೀಮಣ್ಣ ಸೇರಿದಂತೆ ಆತನ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಹುಣಸಗಿ ಪಟ್ಟಣ ನಿವಾಸಿಯಾಗಿರುವ ಕೊಲೆ ಆರೋಪಿ ಭೀಮಣ್ಣ, ತಾನು ಮಾಡಿದ್ದ ಸಾಲ ತೀರಿಸಲು ಪತ್ನಿಯ ದೇಹ ಮಾರಾಟಕ್ಕಿಟ್ಟಿದ್ದ. ಸಾಲ ಪಡೆದಿರುವ ವ್ಯಕ್ತಿಯ ಜೊತೆ ಪಲ್ಲಂಗ ಹಂಚಿಕೊಳ್ಳಲು ಹೇಳಿದ್ದಾನೆ. ಪಲ್ಲಂಗ ಹಂಚಿಕೊಂಡರೆ ಮಕ್ಕಳಾಗುತ್ತವೆ. ಸಾಲ ತೀರಿಸಿದಂತಾಗುತ್ತದೆ ಎಂದು ಕಿರುಕುಳ ನೀಡಿದ್ದ ಎನ್ನಲಾಗಿದೆ.
ಆದರೆ, ಪತ್ನಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಕೋಪಗೊಂಡು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಜು.25ರಂದು ನಡೆದಿದ್ದ ಕೊಲೆ ಕೇಸ್ ನ್ನು ಪೊಲೀಸರು ಭೇದಿಸಿದ್ದಾರೆ. ಕಳೆದ ವರ್ಷ ಶರಣಬಸಮ್ಮ ಜೊತೆ ಆರೋಪಿ ಭೀಮಣ್ಣ ಮದುವೆಯಾಗಿತ್ತು. ಎರಡ್ಮೂರು ತಿಂಗಳ ನಂತರ ಆತನ ಒಂದೊಂದೆ ಕರಾಳ ಮುಖ ಬಯಲಿದೆ ಬಂದಿದ್ದವು. ಕ್ರೂರಿಯ ಅಟ್ಟಹಾಸಕ್ಕೆ ವಿಲವಿಲ ಒದ್ದಾಡಿ ಶರಣಬಸಮ್ಮ ಪ್ರಾಣಬಿಟ್ಟಿದ್ದಾಳೆ. ಸದ್ಯ ಆರೋಪಿಯ ವಿಕೃತಿಗೆ ಎಲ್ಲರೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.