ಉಡುಪಿ : ಕಾಂಗ್ರೆಸ್ ಯಾವಾಗಲೂ ಗೊಂದಲದಲ್ಲೇ ಇರುತ್ತದೆ. ಸಚಿವ ಸಂಪುಟದಲ್ಲಿ ಸಿಎಂ ಸಿದ್ದರಾಮಯ್ಯ ಏಕಾಂಗಿಯಾಗಿದ್ದಾರೆ. ಸಚಿವ ಸಂಪುಟ ಒಡೆದು ಹೋಗಿದೆ. ನವೆಂಬರ್ ಡಿಸೆಂಬರ್ ಬೆಳವಣಿಗೆಯಿಂದ ಕಾಂಗ್ರೆಸ್ ಒಳಗೆ ಒಳಪಂಗಡವಾಗಿದೆ. ಜಾರಕಿಹೋಳಿ, ಡಿಕೆ ಪರಮೇಶ್ವರ್, ಸಿದ್ದರಾಮಯ್ಯ ಸುರ್ಜೇವಾಲ ಪಂಗಡವಾಗಿದ್ದಾರೆ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಸುನೀಲ್ ಕುಮಾರ್, ಕ್ರೈಸ್ತ ಮಿಷನರಿ ನೆರಳು ಸಿಎಂ ಕಚೇರಿ ಮೇಲೆ ಬಿದ್ದಿದೆ. ಮೂಲ ಸಿದ್ದರಾಮಯ್ಯ ನಮಗೆ ಮರೆತುಹೋಗಿದ್ದಾರೆ ಎಂದಿದ್ದಾರೆ.
ಲಿಂಗಾಯತ ಧರ್ಮ ಪ್ರತ್ಯೇಕ ಚರ್ಚೆ ವಿಚಾರದ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ಬಿಜೆಪಿಗೆ ಸ್ಪಷ್ಟವಿದೆ. ಧರ್ಮ ಹಿಂದು ಬರೆಸಬೇಕು ಎಂದು ರಾಜ್ಯಾಧ್ಯಕ್ಷರು ಹೇಳಿದ್ದಾರೆ ಮಠಾಧೀಶರಿಗೆ, ಲಿಂಗಾಯತ ನಾಯಕರಿಗೆ ಮನವೊಲಿಸುತ್ತೇವೆ ಎಂದರು.
ರಾಜ್ಯ ಸರಕಾರ ಹಿಂದುಳಿದ ವರ್ಗಗಳ ಆಯೋಗ ತರಾತುರಿಯಲ್ಲಿ, ಪೂರ್ವಸಿದ್ಧತೆ ಇಲ್ಲದ ಗಣತಿಗೆ ಹೊರಟಿದೆ. ಸಿಎಂ ಒತ್ತಾಯಕ್ಕೆ ಮಣಿದು 15 ಗಡುವಲ್ಲಿ ಗಣತಿ ನಡೆಯಲಿದೆ. ಸರಕಾರ ಜಾತಿಗಣತಿಯನ್ನು ಮುಂದೂಡಬೇಕು ಅದರ ಬಗ್ಗೆ ಮರು ಚಿಂತನೆ ಮಾಡಬೇಕು. ಅಗತ್ಯ ಅನಿವಾರ್ಯತೆ ಬಗ್ಗೆ ಎಲ್ಲರ ಅಭಿಪ್ರಾಯ ಪಡೆಯಬೇಕು. 47 ಹಿಂದೂ ಉಪಜಾತಿ ಜೊತೆ ಕ್ರಿಶ್ಚಿಯನ್ ಜೋಡಿಸಲಾಗಿದೆ ಈ ಬಗ್ಗೆ ವಿರೋಧ ಬಂದಿದೆ ಸರಕಾರ ಅಧಿಕೃತ ಪ್ರಕಟಣೆ ಮಾಡಿಲ್ಲ ಕೈಬಿಡದಿದ್ದರೆ ಪ್ರತಿ ತಾಲೂಕಿನಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.