ದಾವಣಗೆರೆ: ದೇವರಿಗೆ ಕೈ ಮುಗಿದು ಕಿರೀಟ ಎಗರಿಸಿ ಖದೀಮ ಪರಾರಿಯಾಗಿರುವ ಘಟನೆ ನಡೆದಿದೆ.
ದಾವಣಗೆರೆ ಜೈನ್ ಲೇಔಟ್ ನಲ್ಲಿರುವ ಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಖದೀಮ ದೇವರಿಗೆ ಕೈ ಮುಗಿಯುವ ನೆಪದಲ್ಲಿ ದೇವಸ್ಥಾನದೊಳಗೆ ಹೋಗಿ 53 ಸಾವಿರ ರೂ. ಬೆಲೆ ಬಾಳುವ 606 ಗ್ರಾಂ ಬೆಳ್ಳಿ ಕೀರಿಟವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾನೆ.
ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.