ಹಾಸನ: ರಾಜ್ಯದಲ್ಲಿ ಮತ್ತೆ ಬಾಣಂತಿಯರ ಸಾವಿನ ಸರಣಿ ಮುಂದುವರೆದಿದ್ದು, ತಾಯಿ ಹಾಗೂ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.
ಜಿಲ್ಲಾಸ್ಪತ್ರೆಯಲ್ಲೇ (District Hospital) ಈ ಘಟನೆ ನಡೆದಿದೆ. ತುಮಕೂರು (Tumkur) ಜಿಲ್ಲೆಯ, ನೊಣವಿನಕೆರೆ ಮೂಲದ ಬಾಣಂತಿ ಭವ್ಯಾ ಹಾಗೂ ಆಕೆಯ ಮಗು ಸಾವನ್ನಪ್ಪಿದ್ದಾರೆ. ಬಾಣಂತಿ ಹಾಗೂ ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ, ಮಗು ಸಾವು
ಜಿಲ್ಲೆಯ ನೊಣವಿನಕೆರೆ ಮೂಲದ ಭವ್ಯ ಎಂಬುವವರು ಹೆರಿಗೆಗಾಗಿ ಎರಡು ದಿನಗಳ ಹಿಂದೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ದುರದೃಷ್ಟವಶಾತ್, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ರಾಘವೇಂದ್ರ ಪ್ರಸಾದ್, ಭವ್ಯ ಅವರು ಆಸ್ಪತ್ರೆಗೆ ದಾಖಲಾದಾಗ ಅವರ ದೇಹದಲ್ಲಿ ರಕ್ತದ ಪ್ರಮಾಣ ತೀರಾ ಕಡಿಮೆಯಿತ್ತು. ನಾವು ಆಸ್ಪತ್ರೆಗೆ ಬಂದ ತಕ್ಷಣ ಸ್ಕ್ಯಾನಿಂಗ್ ಮತ್ತು ರಕ್ತ ವರ್ಗಾವಣೆ ಮಾಡಲಾಯಿತು. ಆದರೆ ಭ್ರೂಣವು ಈಗಾಗಲೇ ಗರ್ಭದಲ್ಲೇ ಮೃತಪಟ್ಟಿತ್ತು” ಎಂದು ಹೇಳಿದ್ದಾರೆ. ಆದರೆ, ಕುಟುಂಬಸ್ಥರು ಮಾತ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.