ಬೆಂಗಳೂರು : ಸಪ್ಟೆಂಬರ್ ಕ್ರಾಂತಿ ಬಾಲಕೃಷ್ಣ ಅವರಿಂದಲೇ ಶುರು ಆಗುತ್ತದೆ. ರಾಜಣ್ಣ ಹೇಳಿದ್ದ ಸೆಪ್ಟೆಂಬರ್ ಕ್ರಾಂತಿ ಇದೆ. ಇವರ ತಂಡವೇ ಬಿಜೆಪಿ ಗೆ ಹೋಗಬಹುದು. ಸಿಎಂ ಮಾಡುತ್ತೇವೆ ಅಂದರೆ, ಇವರೆಲ್ಲ ಬಿಜೆಪಿಗೆ ಹೋಗಬಹುದು. ಸಿಎಂ ಸ್ಥಾನ ಕೊಡುತ್ತೇವೆ ಎಂದರೆ ಡಿಕೆಶಿ ಮತ್ತವರ ತಂಡ ಬಿಜೆಪಿಗೆ ಹೋಗಬಹುದು ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಕೆ.ಎನ್ ರಾಜಣ್ಣ ಪುತ್ರ ರಾಜೇಂದ್ರ ರಾಜಣ್ಣ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ರಾಜೇಂದ್ರ ರಾಜಣ್ಣ, ಬಾಲಕೃಷ್ಣ ಬಿಜೆಪಿ, ಜೆಡಿಎಸ್ ಎರಡನ್ನೂ ಮುಗಿಸಿ ಬಂದಿದ್ದಾರೆ. ಕೆಲವರಿಗೆ ಮಾತಾಡುವ ತೀಟೆ ತೆವಲು. ಅದನ್ನು ತೀರಿಸಿಕೊಳ್ಳಲು ಹೀಗೆ ಮಾತಾಡುತ್ತಾರೆ. ರಾಜಣ್ಣ ಸದನದಲ್ಲಿ ಆರ್.ಎಸ್.ಎಸ್ ಗೀತೆಯನ್ನೇನೂ ಹಾಡಿಲ್ಲ. ರಾಜಣ್ಣ ಬಾಲ್ಯದಿಂದ ಆರ್ ಎಸ್ ಎಸ್ ಚಡ್ಡಿ ಹಾಕಿಕೊಂಡು ಸಂಘದ ಶಾಖೆಗೆ ಹೋಗಿಲ್ಲ. ಸೆಪ್ಟೆಂಬರ್ ಆದಮೇಲೆ ಬಿಜೆಪಿಗೆ ಇವರೇ ಹೋದರೂ ಆಶ್ಚರ್ಯ ಇಲ್ಲ. ಯತ್ನಾಳ್ ಆಗಲೇ ಇದನ್ನು ಬಹಿರಂಗ ಮಾಡಿದ್ದಾರೆ. ರಾಜ್ಯದಲ್ಲಿ ಸೆಪ್ಟೆಂಬರ್ ಕ್ರಾಂತಿ ನಡೆದು ಬಾಲಕೃಷ್ಣ ಅವರೆಲ್ಲ ಬಿಜೆಪಿಗೆ ಹೋಗಬಹುದು. ಅಧಿಕಾರ ಶಾಶ್ವತ ಅಲ್ಲ, ಜನರಿಗೆ ಬಿಟ್ಟಿದ್ದು. ನಾಲಿಗೆ ಮೇಲೆ ಹಿಡಿತ ಇಟ್ಟುಕೊಂಡ ಮಾತಾಡಲಿ. ಕೆಲವರಿಗೆ ಓಲೈಸಲು ಮಾತಾಡುವ ಚಟ ಎಂದಿದ್ದಾರೆ.
ಷಡ್ಯಂತ್ರದಿಂದ ಇವರೇ ಸೇರಿ ರಾಜಣ್ಣ ಅವರ ಸಚಿವ ಸ್ಥಾನದಿಂದ ಕೆಳಗಿಳಿಸಿದ್ದಾರೆ. ಆಗಿರುವ ತಪ್ಪಿಗೆ ಮತ್ತೆ ಮಂತ್ರಿ ಸ್ಥಾನ ನೀಡಬೇಕೆಂದು ಶಾಂತಿಯುತ ಪ್ರತಿಭಟನೆಗಳಾಗಿವೆ ವಾಗ್ದಾಳಿ ಮಾಡಿದ್ದಾರೆ.