ಮಹಿಳಾ ಆಯೋಗದ ಆಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವೆಡೆ ಅಭಿಮಾನಿಗಳು ಪೋಸ್ಟರ್, ಬ್ಯಾನರ್, ಕಟೌಟ್ ಗಳನ್ನು ಹಾಕಿ ಶುಭಾಶಯ ಕೋರುತ್ತಿದ್ದಾರೆ.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರ ಹುಟ್ಟು ಹಬ್ಬ ನಾಳೆ (ಅಕ್ಟೋಬರ್ 18) ಇರುವ ಸಲುವಾಗಿ, ವಿಜಯನಗರದ ಮಾರೇನಹಳ್ಳಿಯ ಆವರ ಗೃಹ ಕಚೇರಿ ಹತ್ತಿರ ಹುಟ್ಟು ಹಬ್ಬದ ಕಾರ್ಯಕ್ರಮ ಆಚರಿಸಲು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ನಾಗಲಕ್ಷ್ಮೀ ಅವರು ಕಾಂಗ್ರೆಸ್ ನ ಪ್ರಮುಖ ಮಹಿಳಾ ನಾಯಕಿಯರಲ್ಲೊಬ್ಬರು. ಇವರು ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ನೇಮಕಗೊಂಡಾಗಿನಿಂದಲೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯದ ಉದ್ದಗಲಕ್ಕೂ ಸಂಚರಿಸುತ್ತಾ, ನೊಂದ ಮಹಿಳೆಯರ ಪರ ಸಮರ್ಥ ಶಕ್ತಿಯಾಗಿ ನಿಂತು ಕಾರ್ಯ ನಿರ್ವಹಿಸುತ್ತಿದ್ದಾರೆ. ಫಲವಾಗಿ ಇಂದಿಗೆ ಇವರಿಂದ ಅನೇಕ ನೊಂದ ಮಹಿಳೆಯರಿಗೆ ನ್ಯಾಯ ದೊರಕಿದೆ. ಇವರಿಂದ ಸಹಾಯ, ಸಾಂತ್ವನ ಪಡೆದ ನೂರಾರು ಮಹಿಳೆಯರು ಇಂದು, ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ.

ಹೀಗೆ ಸದಾ ಬಡವರ, ನೊಂದವರ ಸೇವೆ ಮಾಡುತ್ತಾ, ನ್ಯಾಯೋಚಿತವಾಗಿ ಕೆಲಸ ಮಾಡುವ ಆವರ ನಾಳಿನ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಇದರ ಭಾಗವಾಗಿ ಬೆಂಗಳೂರಿನ ಹಲವೆಡೆ ಅವರ ಅಭಿಮಾನಿಗಳು ಬ್ಯಾನರ್, ಪೋಸ್ಟರ್ ಗಳನ್ನು ಹಾಕಿ ಶುಭಾಶಯ ತಿಳಿಸುತ್ತಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
