ಕೊಪ್ಪಳ: ಐತಿಹಾಸಿಕ ಪ್ರಸಿದ್ಧ ಹನುಮ ಹುಟ್ಟಿರುವ ನಾಡು ಅಂಜನಾದ್ರಿ ಬೆಟ್ಟಕ್ಕೆ ಡಿ.13 ರಂದು ಹನುಮ ಮಾಲೆ ವಿಸರ್ಜಿಸುವುದಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಹೀಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮಾಲೆ ವಿಸರ್ಜಿಸಲು ದೇಶದ ಮೂಲೆ ಮೂಲೆಗಳಿಂದ ಸಾವಿರಾರು ಹನುಮ ಭಕ್ತರು ಆಗಮಿಸಲಿದ್ದಾರೆ. ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಕೂಡ ಈ ವರ್ಷ ಹನುಮ ಮಾಲೆ ಧರಿಸಿ ವೃತ ಆರಂಭಿಸಿದ್ದಾರೆ. ಅಂಜನಾದ್ರಿಯು ರಾಮನ ಭಂಟ ಹನುಮನ ಜನ್ಮಸ್ಥಳ.
ಹೀಗಾಗಿ ಇದು ಭಕ್ತರ ಆರಾಧ್ಯ ಕೇಂದ್ರವಾಗಿದೆ. ಪ್ರತಿದಿನ ಸಾವಿರಾರು ಸಂಕ್ಯೆಯಲ್ಲಿ ಭಕ್ತರು ಅಂಜನಾದ್ರಿಗೆ ಆಗಮಿಸುತ್ತಾರೆ. ಪ್ರತಿವರ್ಷ ಹನುಮ ಮಾಲೆ ವಿಸರ್ಜನೆಗೆ ನಾಡಿನ ವಿವಿಧೆಡೆಯಿಂದ ಸಾವಿರಾರು ಹನುಮ ಭಕ್ತರು ಅಂಜನಾದ್ರಿಗೆ ಬರುತ್ತಾರೆ. ಮಾರ್ಗಶಿರ ಶುದ್ದ ತ್ರಯೋದಶಿ ಸಮಯದಲ್ಲಿ ಸಂಕಲ್ಪ ಮಾಡಿ ಮಾಲೆಯನ್ನು ಧರಿಸಿ ವೃತವನ್ನು ಆಚರಿಸಿದರೆ, ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಹನುಮ ಭಕ್ತರು ಮಾಲೆ ಧರಿಸಿದ್ದಾರೆ. ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಕೂಡ ಹನುಮ ಮಾಲೆ ಧರಿಸಿ, ಐದು ದಿನಗಳ ವೃತವನ್ನು ಆರಂಭಿಸಿದ್ದಾರೆ.
ಡಿ. 13 ರಂದು ಹನುಮ ಮಾಲೆ ವಿಸರ್ಜನೆಗೆ ಬೇಕಾದ ಸಿದ್ದತೆಗಳನ್ನು ಕೂಡ ಈಗಾಗಲೇ ಜಿಲ್ಲಾಡಳಿತ ಆರಂಭಿಸಿದೆ.