ಬೆಂಗಳೂರು: ವ್ಹೀಲಿಂಗ್ ಹಾವಳಿ ವಿರುದ್ಧ ಪೊಲೀಸರು ಎಷ್ಟೇ ಸಮರ ಸಾರಿದರೂ ಪುಂಡರ ಹಾವಳಿ ಮಾತ್ರ ನಿಲ್ಲುತ್ತಿಲ್ಲ.
ಹತ್ತಾರು ಯುವಕರು ರಸ್ತೆಯನ್ನೇ ಬ್ಲಾಕ್ ಮಾಡಿ ವ್ಹೀಲಿಂಗ್ ಮತ್ತು ಸ್ಟಂಟ್ ಮಾಡಿರುವ ಘಟನೆಯೊಂದು ವರದಿಯಾಗಿದೆ. ಈ ಯುವಕರು ನಡು ರಸ್ತೆಯಲ್ಲೇ ಸ್ಟಂಟ್ ಮಾಡಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಂಗಳೂರಿನಲ್ಲಿ ನಡೆದಿದೆ ಎನ್ನಲಾದ ವೀಲಿಂಗ್ ಮತ್ತು ಸ್ಟಂಟ್ ವಿಡಿಯೋ ಹರಿದಾಡುತ್ತಿದೆ. ರಸ್ತೆಯಲ್ಲಿ ಸಾಗುವ ವಾಹನ ಸವಾರರಿಗೂ ಅವಕಾಶ ನೀಡದಂತೆ ರಸ್ತೆ ಬಂದ್ ಮಾಡಿ ಸ್ಟಂಟ್ ಮಾಡಿದ್ದಾರೆ. ವಾಹನ ಸವಾರರು ಈ ವಿಡಿಯೋ ಸೆರೆ ಹಿಡಿದು ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಸದ್ಯ ವಿಡಿಯೋ ಆಧರಿಸಿ ಪೊಲೀಸರು ವ್ಹೀಲಿಂಗ್ ಪುಂಡರಿಗಾಗಿ ಹುಡುಕಾಟ ನಡೆಸಿದ್ದಾರೆ.