ಬೆಂಗಳೂರು: ಮುಡಾ ಹಗರಣದ ಆರೋಪ ಸಿಎಂಗೆ ಸಂಕಷ್ಟ ತಂದಿದೆ. ಈಗಾಗಲೋ ಕೋರ್ಟ್ ತನಿಖೆಗೆ ಸೂಚಿಸಿದೆ.
ಈ ಮಧ್ಯೆ ವಿಪಕ್ಷಗಳ ನಾಯಕರು ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಎಂದು ಆಗ್ರಹಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರೆಲ್ಲ ಸಿಎಂ ಬೆನ್ನಿಗೆ ನಿಂತರೆ, ಕಾಂಗ್ರೆಸ್ ನ ಹಿರಿಯ ನಾಯಕ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಮಾತ್ರ ರಾಜೀನಾಮೆ ನೀಡುವಂತೆ ಸಲಹೆ ನೀಡಿದ್ದಾರೆ.
ಬಿಜೆಪಿಯವರು ಸಿದ್ದರಾಮಯ್ಯ ವಿಚಾರದಲ್ಲಿ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡುತ್ತಿದ್ದಾರೆ. ನಾನು 50 ವರ್ಷದ ರಾಜಕೀಯ ಜೀವನದಲ್ಲಿ ಅನೇಕ ಸಿಎಂಗಳನ್ನು ನೋಡಿದ್ದೇನೆ. ವಿರೋಧ ಪಕ್ಷದವರ ಕುತಂತ್ರದಿಂದ ಸುಳ್ಳು ಆಪಾದನೆ ಸಿದ್ದರಾಮಯ್ಯ ಮೇಲೆ ಬಂದಿದೆ. ಎಲ್ಲ ಹಿಂದಿನ ಸಿಂಗಳಿಗೆ ಹೋಲಿಕೆ ಮಾಡಿದರೆ, ಸಿದ್ದರಾಮಯ್ಯ ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ಮಾಡಿದ ನಂಬರ್ 1 ಸ್ಥಾನದಲ್ಲಿದ್ದಾರೆ. ಆದರೆ, ಈಗ ಸಿದ್ದರಾಮಯ್ಯ ಈ ಕುತಂತ್ರ ಗೆದ್ದು ಬರಬೇಕಿದೆ ಎಂದು ಹೇಳಿದ್ದಾರೆ.
ಕಳಂಕ ರಹಿತರಾದರೂ ಪಕ್ಷದ ದೃಷ್ಟಿಯಿಂದ ಸಿದ್ದರಾಮಯ್ಯ ರಾಜೀನಾಮೆ ನೀಡಲಿ. ತನಿಖೆಯಲ್ಲಿ ನಿಷ್ಕಳಂಕರಾಗಿ ಹೊರ ಬಂದ ನಂತರ ಮತ್ತೆ ಸಿದ್ದರಾಮಯ್ಯ ಸಿಎಂ ಆಗಲಿ. 136 ಶಾಸಕರು ಸಿದ್ದರಾಮಯ್ಯ ಜೊತೆಗೆ ಇದ್ದಾರೆ. ಪಕ್ಷದ ಹಿತದೃಷ್ಟಿಯಿಂದ ಸಿದ್ದರಾಮಯ್ಯ ರಾಜೀನಾಮೆ ನೀಡಿ ನಿಷ್ಕಳಂಕರಾಗಲಿ ಎಂದು ಸಲಹೆ ನೀಡಿದ್ದಾರೆ.