ಬೆಂಗಳೂರು: ಗಣರಾಜ್ಯೋತ್ಸವ ದಿನಾಚರಣೆ ಆಗಮಿಸುತ್ತಿದ್ದಂತೆ ರಾಜ್ಯದಲ್ಲಿ ಮತ್ತೆ ಕನ್ನಡ ನಾಮಫಲಕಗಳ ವಿಚಾರ ಮುನ್ನೆಲೆಗೆ ಬಂದಿದೆ. ಅಲ್ಲದೇ, ನಾಮಫಲಕ ಕಡ್ಡಾಯಗೊಳಿಸಲು ಪಾಲಿಕೆ ಹೊಸ ನಿಯಮ ರೂಪಿಸಲು ಮುಂದಾಗಿದೆ.
ಕನ್ನಡ ಪ್ರಾಧಿಕಾರದ ಅದೇಶದ ಮೇರೆಗೆ ನಾಮಪಾಲಕ ಕಡ್ಡಾಯಕ್ಕೆ ಬಿಬಿಎಂಪಿ ಚಿಂತನೆ ನಡೆಸಿದೆ. ನಾಮಫಲಕ ಕಡ್ಡಾಯದ ಕುರಿತು ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಭೆ ನಡೆಯಿತು. ಈ ವೇಳೆ ನಾಮಫಲಕ ಕಡ್ಡಾಯಗೊಳಿಸಬೇಕೆಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷರು ಬಿಬಿಎಂಪಿ ಆಯುಕ್ತರಿಗೆ ಸಲಹೆ ನೀಡಿದ್ದಾರೆ.
ಬಿಬಿಎಂಪಿಯಿಂದ ಲೈಸೆನ್ಸ್ ಪಡೆದ ಮಳಿಗೆಗಳಿಗೆ ಲೈಸೆನ್ಸ್ ನವೀಕರಣ ಮಾಡುವ ಸಂದರ್ಭದಲ್ಲಿ ಕನ್ನಡ ಬೋರ್ಡ್ ಬಳಕೆ ಮಾಡಿದರೆ ಮಾತ್ರ ಲೈಸೆನ್ಸ್ ರಿನಿವಲ್ ಮಾಡಿ ಎಂದು ಸೂಚಿಸಿದ್ದಾರೆ. ಪ್ರತಿಯೊಂದು ಮಳಿಗೆಯ ಮೇಲೆ ಶೇ. 60ರಷ್ಟು ಕನ್ನಡದಲ್ಲೇ ಬೋರ್ಡ್ ಹಾಕಿರಬೇಕು. ಇಲ್ಲವಾದರೆ ಲೈಸೆನ್ಸ್ ನವೀಕರಣ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.
ಕನ್ನಡ ಪ್ರಾಧಿಕಾರದ ಅಧ್ಯಕ್ಷರ ಸಲಹೆ ಮೇರೆಗೆ ಪಾಲಿಕೆ ಅಯುಕ್ತರು ಕ್ರಮದ ಕುರಿತು ಮಾಹಿತಿ ನೀಡಿದ್ದಾರೆ. ಬಿಬಿಎಂಪಿಯಿಂದ ಪರವಾನಗಿ ಪಡೆದ ಯಾವುದೇ ಮಳಿಗೆ ಅಥವಾ ಮಾಲ್ ಗಳು ಲೈಸೆನ್ಸ್ ರೀನಿವಲ್ ಗೆ ಬಂದಾಗ ಕಡ್ಡಾಯವಾಗಿ ಕನ್ನಡ ನಾಮಪಾಲಕ ಅಳವಡಿಕೆ ಮಾಡಿರುವುದನ್ನು ಗಮನಿಸಬೇಕು. ಕನ್ನಡ ಬೋರ್ಡ್ ಅಳವಡಿಕೆ ಮಾಡಿದರೆ ಮಾತ್ರ ಲೈಸೆನ್ಸ್ ರಿನಿವಲ್ ಮಾಡಬೇಕು. ಇಲ್ಲವಾದರೆ, ಲೈಸೆನ್ಸ್ ರಿನಿವಲ್ ಮಾಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಲೈಸೆನ್ಸ್ ರಿನಿವಲ್ ಗೆ ಬಂದಗ ಖುದ್ದು ನಮ್ಮ ಅಧಿಕಾರಿಗಳು ಮಳಿಗೆ ಪರಿಶೀಲನೆ ಮಾಡಿ ಲೈಸೆನ್ಸ್ ವಿತರಣೆ ಮಾಡಬೇಕು. ಕನ್ನಡ ನಾಮಪಾಲಕ ಇಲ್ಲವದ್ರೆ ಲೈಸೆನ್ಸ್ ರಿನಿವಲ್ ಮಾಡಬಾರದು. ಲೈಸೆನ್ಸ್ ರಿನಿವಲ್ ಮಾಡದ ಮಳಿಗೆಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದಾರೆ.