ಚಿಕ್ಕೋಡಿ : ಇತ್ತೀಚೆಗೆ ಅಪರೂಪದ ತಳಿಯ ಜಾನುವಾರುಗಳು ದಾಖಲೆಯ ಬೆಲೆಗೆ ಮಾರಾಟವಾಗಿರುವ ಸುದ್ದಿ ಕೇಳಿದ್ದೇವೆ. ಈ ಸಾಲಿಗೆ ಈಗ ಕೋಣವೊಂದು ಬಂದು ನಿಂತಿದೆ. ಜಿಲ್ಲೆಯಲ್ಲಿ ಕೋಣವೊಂದು (Buffalo) 1.15 ಲಕ್ಷ ರೂ.ಗೆ ಮಾರಾಟವಾಗುವ ಭಾರೀ ಸದ್ದು ಮಾಡುತ್ತಿದೆ.
ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ರಾಯಪ್ಪ ಚೌಗಲಾ ಎಂಬುವವರಿಗೆ ಸೇರಿದ ಕೋಣವೊಂದು ಬರೋಬ್ಬರಿ 1.15 ಲಕ್ಷ ರೂ.ಗೆ ಮಾರಾಟವಾಗಿದೆ. 8.50 ಕ್ವಿಂಟಾಲ್ ತೂಕ ಹೊಂದಿರುವ ಕೋಣ ಸಂತಾನೋತ್ಪತ್ತಿಗೆ ಹೆಸರು ಮಾಡಿದೆ. ಹೀಗಾಗಿ ಈ ಕೋಣಕ್ಕೆ ಕುಟುಂಬಸ್ಥರು ಪ್ರತಿ ದಿನ 400 ರಿಂದ 500 ರೂ ವ್ಯಯಿಸುತ್ತಿದ್ದರು. ಈಗ ಮೇವಿನ ಕೊರತೆಯಿಂದಾಗಿ ಮಾರಾಟ ಮಾಡಿದ್ದಾರೆ. ಬಾಗಲಕೋಟ ಜಿಲ್ಲೆಯ ರಬಕವಿ ಪಟ್ಟಣದ ಜಾನವಾರಗಳ ವ್ಯಾಪರಸ್ಥರೊಬ್ಬರು ಈ ಕೋಣವನ್ನು ಖರೀದಿಸಿದ್ದಾರೆ ಎನ್ನಲಾಗಿದೆ.