ಬೆಂಗಳೂರು | ಸ್ಯಾಂಡಲ್‌ವುಡ್ ಅಭಿನಯ ಚತುರ ನೀನಾಸಂ ಸತೀಶ್ ಹಾಗೂ ಕಾಂತಾರ ಬೆಡಗಿ ಸಪ್ತಮಿಗೌಡ ಅಭಿನಯದ ಬಹುನಿರೀಕ್ಷಿತ ಚಿತ್ರ ‘ದಿ ರೈಸ್ ಆಫ್ ಅಶೋಕ‘ ಸಿನಿಮಾ ಇದೇ ಫೆಬ್ರವರಿ.27ಕ್ಕೆ ರಿಲೀಸ್ ಆಗ್ತಿದೆ.

ಬಿಡುಗಡೆಯ ದಿನಾಂಕವನ್ನು ವಿಶೇಷವಾಗಿ ಘೋಷಿಸಿರೋ ನಟ ನೀನಾಸಂ ಸತೀಶ್, ಅದಕ್ಕಾಗಿಯೇ ಸ್ಪೆಷಲ್ ವಿಡಿಯೋ ತಯಾರಿಸಿಕೊಂಡಿದ್ದಾರೆ. ‘ಒಳ್ಳೆ ಸುದ್ದಿ ಕಣ್ರಪ್ಪೋ, ರಿಲೀಸ್ ಡೇಟು ಅನೌನ್ಸ್ ಆಗೈತಿ’ ಅಂತ ವಿಡಿಯೋ ಬಿಟ್ಟಿದ್ದಾರೆ.
‘ದಿ ರೈಸ್ ಆಫ್ ಅಶೋಕ‘ ಸಿನಿಮಾದಲ್ಲಿ ಒಬ್ಬ ಕ್ರಾಂತಿಕಾರಿ ಯುವಕನ ಪಾತ್ರದಲ್ಲಿ ಸತೀಶ್ ಕಾಣಿಸಿಕೊಳ್ತಿದ್ದು, ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ‘ದಿ ರೈಸ್ ಆಫ್ ಅಶೋಕ’ ತೆರೆಗೆ ಬರ್ತಿದೆ. ಫೆಬ್ರವರಿ ಅಂತ್ಯಕ್ಕೆ ಯಾವ ಕನ್ನಡದ ದೊಡ್ಡ ಸಿನಿಮಾಗಳೂ ಇಲ್ಲದೇ ಇರೋದು ‘ಅಶೋಕ’ನಿಗೆ ಪ್ಲಸ್ ಪಾಯಿಂಟ್ ಆಗೋ ಚಾನ್ಸ್ ಇದೆ.
ಇದನ್ನೂ ಓದಿ : ಶಿವಮೊಗ್ಗ | ಮನೆಯನ್ನೇ ಬಂದೂಕು ಫ್ಯಾಕ್ಟರಿ ಮಾಡಿಕೊಂಡಿದ್ದ ವ್ಯಕ್ತಿಯ ಬಂಧನ!



















