ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಪುಡಿರೌಡಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದೇ ರೀತಿ ಇದೀಗ ಸಿಲಿಕಾನ್ ಸಿಟಿಯಲ್ಲಿ ಕೆಲವು ಪುಡಿರೌಡಿಗಳು ಪುಂಡಾಟ ಮೆರೆದಿದ್ದಾರೆ. ಅಂಗಡಿಯಲ್ಲಿ ಸಿಗರೇಟ್ ಕೊಟ್ಟಿಲ್ಲವೆಂದು, ವಸ್ತುಗಳನ್ನ ಬಿಸಾಡಿ ದಾಂದಲೆ ಮಾಡಿದ್ದಾರೆ.
ಪೊಲೀಸರಿಗೆ ಹೇಳ್ತೀನಿ ಅಂತ ಮಾಲೀಕ ಹೇಳಿದ್ರೆ, ಪೊಲೀಸರ ಕೈಯ್ಯಲ್ಲಿ ಏನು ಮಾಡಕಾಗಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದೆಲ್ಲಾ ವೀಡಿಯೋ ಅಂಗಡಿ ಮಾಲೀಕನ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸುದ್ದಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.