ನಂಜನಗೂಡು ನಂಜುಂಡೇಶ್ವರ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುತ್ತಾರೆ. ಕಪಿಲಾ ನದಿಯ ಬಲದಂಡೆಯಲ್ಲಿರುವ ನಂಜನಗೂಡನ್ನು “ದಕ್ಷಿಣ ಕಾಶಿ ಎನ್ನುತ್ತಾರೆ. ಹೀಗಾಗಿ ಇಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿರುತ್ತದೆ. ಭಕ್ತರು ತಮ್ಮ ಕಷ್ಟ ಈಡೇರಿಸಬೇಕೆಂದು ನಂಜುಂಡನಲ್ಲಿ ಬಂದು ಹರಕೆ ಹೊರುತ್ತಾರೆ. ಹೀಗಾಗಿ ನಂಜುಂಡೇಶ್ವರನಿಗೆ ಕಾಣಿಕೆ ಹಾಗೂ ಹರಕೆ ಪತ್ರಗಳು ಹರಿದು ಬರುತ್ತಿರುತ್ತವೆ. ಮಂಗಳವಾರ ಕೂಡ ವಿಧ ವಿಧ ಪತ್ರಗಳು ಸಿಕ್ಕಿವೆ.
ಮಂಗಳವಾರ ಕೂಡ ನಂಜನಗೂಡಿನ ನಂಜುಂಡೇಶ್ವರ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು. ನಿನ್ನ ದರ್ಶನಕ್ಕೆ ಬರುವ ಭಕ್ತರಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಓರ್ವ ಭಕ್ತರು ಪತ್ರ ಬರೆದಿದ್ದು, ಇದು ಎಲ್ಲರನ್ನೂ ಆಕರ್ಷಿಸುತ್ತಿದೆ.
ಭಕ್ತರು ಕಾಣಿಕೆಯೊಂದಿಗೆ ಹರಕೆಯ ಪತ್ರಗಳನ್ನು ಕೂಡ ಹಾಕಿದ್ದಾರೆ. ಭಕ್ತರೊಬ್ಬರು ‘ಪ್ರತಿ ತಿಂಗಳು ಕೋಟಿ ಕೋಟಿ ಹಣವನ್ನು ಭಕ್ತರು ನಿನ್ನ ಹುಂಡಿಯಲ್ಲಿ ಹಾಕುತ್ತಾರೆ. ಆದರೂ ಬಡ ಭಕ್ತರಿಗೆ ಯಾಕಿಲ್ಲ ವ್ಯವಸ್ಥೆ ಎಂದು ಬರೆದಿದ್ದಾರೆ.
ನಂಜನಗೂಡಿನ ದೇವಸ್ಥಾನನದ ಬಳಿ ಬಡವರ ವಾಸ್ತವ್ಯಕ್ಕೆ ವ್ಯವಸ್ತೆ ಇಲ್ಲ, ಕಪಿಲಾ ನದಿಯ ದಡದಲ್ಲಿ ಬಟ್ಟೆ ಬದಲಾಯಿಸಲು ಜಾಗವಿಲ್ಲ. ಬಡ ಭಕ್ತರಿಗೆ ಸರಿಯಾದ ಪ್ರಸಾದವಿಲ್ಲ. ದಯವಿಟ್ಟು ಭಕ್ತರು ಹಾಕುವ ಹಣವನ್ನು ಮೂಲ ಸೌಕರ್ಯಕ್ಕೆ ಬಳಸಿ ಎಂದು ಪತ್ರ ಬರೆದು ಮನವಿ ಮಾಡಿದ್ದಾರೆ. ವಿವಿಧ ಪತ್ರಗಳಲ್ಲಿ ಭಕ್ತರು ತಮ್ಮ ಇಷ್ಟಾರ್ಥ ಈಡೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದ್ದಾರೆ.