ಬೆಂಗಳೂರು: ಇಲ್ಲಿನ ಯಲಂಹಕದಲ್ಲಿ ನಡೆಯುತ್ತಿರುವ ‘ಏರೋ ಇಂಡಿಯಾ 2025’ (Aero India 2025) ಉತ್ತಮವಾಗಿ ನಡೆಯುತ್ತಿದ್ದು, ಇಂದಿನಿಂದ ಸಾರ್ವಜನಿಕರಿಗೆ ಏರ್ ಶೋ ವೀಕ್ಷಣೆಗೆ ಅವಕಾಶ ನೀಡಲಾಗಿದೆ.
ಸಾರ್ವಜನಿಕರಿಗೆ ಇಂದು ಮತ್ತು ನಾಳೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಇಂದು, ನಾಳೆ ಲಕ್ಷಾಂತರ ಜನ ಭಾಗಿಯಾಗುವ ಸಾಧ್ಯತೆ ಇದೆ. ಮೊದಲ ಮೂರು ದಿನ ಕೇವಲ ಅಡ್ವಾ ಪ್ರದೇಶಕ್ಕೆ ಮಾತ್ರ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಇಂದಿನಿಂದ ಎರಡು ದಿನ ಸಂಪೂರ್ಣ ಏರೋ ಇಂಡಿಯಾ ವೀಕ್ಷಣೆಗಾಗಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ಒಂದು ಸಾವಿರ, ಎರಡೂವರೆ ಸಾವಿರಕ್ಕೆ ಟಿಕೆಟ್ ಪಡೆದವರು ಸಂಪೂರ್ಣ ಏರೋ ಇಂಡಿಯಾ ವೀಕ್ಷಣೆಗೆ ಅವಕಾಶ ಇರಲಿದೆ. ಬೆಳಗ್ಗೆ 9:30 ರಿಂದ 12 ಮತ್ತು ಮಧ್ಯಾಹ್ನ 2:30 ರಿಂದ ಸಂಜೆ 5 ಗಂಟೆ ವರೆಗೆ ಏರ್ ಶೋ ಎರಡು ಪ್ರದರ್ಶನ ಇರಲಿದೆ.
ಸೂರ್ಯಕಿರಣ, ಅಮೆರಿಕದ ಎಫ್ 35, ರಷ್ಯಾದ ಎಸ್‌ಯು 57, ತೇಜಸ್ ಎಲ್ಸಿಎ, ಎಲ್ಯುಹೆಚ್ ಹೆಲಿಕಾಪ್ಟರ್ ಪ್ರದರ್ಶನ ಕಣ್ಮನ ಸೆಳೆಯಲಿದೆ. ಎರಡೂವರೆ ಸಾವಿರ, 5 ಸಾವಿರ ಟಿಕೆಟ್ ಪಡೆದವರಿಗೆ ಕಾರ್ಯಕ್ರಮ ಪ್ರದೇಶದ ಬಳಿ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಲಾಗಿದೆ. 1 ಸಾವಿರ ರೂ. ಟಿಕೆಟ್ ಪಡೆದವರಿಗೆ ಜಕ್ಕೂರು, ಜಿಕೆವಿಕೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಇರಲಿದೆ.