ನರೇಂದ್ರ ಮೋದಿ(Narendra Modi) ಅವರು 18ನೇ ಲೋಕಸಭಾ ನಾಯಕರಾಗಿ ಆಯ್ಕೆಯಾಗಿದ್ದಾರೆ. ಆಯ್ಕೆಯ ನಂತರ ನರೇಂದ್ರ ಮೋದಿ ಮಾತನಾಡಿದ್ದಾರೆ.
ಸರ್ಕಾರ ನಡೆಸಲು ಬಹುಮತ ಅಗತ್ಯ. ಆದರೆ, ದೇಶ ಮುನ್ನಡೆಸಲು ಒಮ್ಮತ ಅಗತ್ಯ. ಎನ್ ಡಿಎದಲ್ಲಿ ಒಮ್ಮತವಿದ್ದು, ನಾವು ಒಮ್ಮತದಿಂದ ಸರ್ಕಾರ ನಡೆಸುತ್ತೇವೆ. ಅದು ಪ್ರಜಾಪ್ರಭುತ್ವದ ಏಕೈಕ ತತ್ವವಾಗಿದೆ ಎಂದು ಹೇಳಿದ್ದಾರೆ.
2019 ರಲ್ಲಿ, ನೀವೆಲ್ಲರೂ ನನ್ನನ್ನು ನಾಯಕನಾಗಿ ಆಯ್ಕೆ ಮಾಡಿದಾಗ, ನಾನು ನಂಬಿಕೆಗೆ ಒತ್ತು ನೀಡಿದ್ದೆ. ಇಂದು ನೀವು ಮತ್ತೊಮ್ಮೆ ನನಗೆ ಈ ಜವಾಬ್ದಾರಿಯನ್ನು ನೀಡುತ್ತಿದ್ದೀರಿ ಎಂದರೆ ನಮ್ಮ ನಡುವಿನ ನಂಬಿಕೆಯ ಸೇತುವೆ ತುಂಬಾ ಬಲವಾಗಿದೆ ಎಂದು ಹೇಳಿದ್ದಾರೆ.
ಸಮ್ಮಿಶ್ರ ರಾಜಕೀಯದ ಇತಿಹಾಸದಲ್ಲಿ, ಚುನಾವಣಾ ಪೂರ್ವ ಮೈತ್ರಿ ಎಂದಿಗೂ ಎನ್‌ಡಿಎ ಬಲ ನೀಡಿರಲಿಲ್ಲ. ಇದು ಮೈತ್ರಿಕೂಟದ ಗೆಲುವು. ಲೋಕಸಭೆಯಲ್ಲಿ ಬಿಜೆಪಿಯ ಹಿರಿಯ ನಾಯಕ ರಾಜನಾಥ್ ಸಿಂಗ್ ಅವರು ನರೇಂದ್ರ ಮೋದಿ ಹೆಸರನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಮತ್ತು ಬಿಜೆಪಿಯ ನಾಯಕರಾಗಿ ಪ್ರಸ್ತಾಪಿಸಿದರು.
ನಂತರ ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ, ನಿತಿನ್ ಗಡ್ಕರಿ ಮತ್ತು ಎನ್‌ಡಿಎ ಪಾಲುದಾರ ಟಿಡಿಪಿಯ ಚಂದ್ರಬಾಬು ನಾಯ್ಡು, ಜೆಡಿಯುನ ನಿತೀಶ್ ಕುಮಾರ್, ಶಿವಸೇನೆಯ ಏಕನಾಥ್ ಶಿಂಧೆ ಸೇರಿದಂತೆ ಇನ್ನಿತರರು ಬೆಂಬಲಿಸಿದರು.