ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್ ಗಾಂಧಿಗೆ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಅದಾನಿ-ಅಂಬಾನಿಯನ್ನು (Adani-Ambani) ಈ ಚುನಾವಣೆಯಲ್ಲಿ ನಿಂದಿಸುತ್ತಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ. ತೆಲಂಗಾಣದ ಕರೀಂಪುರದಲ್ಲಿ ನಡೆದ ಪಕ್ಷದ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ ಪ್ರಧಾನಿ, ಐದು ವರ್ಷಗಳಿಂದ ಕಾಂಗ್ರೆಸ್‌ನ ಶೆಹಜಾದ (ರಾಹುಲ್ ಗಾಂಧಿ) ಹೋದಲ್ಲಿ ಬಂದಲ್ಲಿ ಐದು ಕೈಗಾರಿಕೋದ್ಯಮಿಗಳು, ಐದು ಕೈಗಾರಿಕೋದ್ಯಮಿಗಳು ಎಂದು ಹೇಳುತ್ತಿದ್ದರು. ನಂತರ ಅವರು ಅಂಬಾನಿ-ಅದಾನಿ ಎಂದು ಹೇಳಲು ಆರಂಭಿಸಿದರು. ಆದರೆ, ಈ ಚುನಾವಣೆಯಲ್ಲಿ ನಿಂದಿಸುತ್ತಿಲ್ಲ. ಏಕೆ ಎಂದು ಪ್ರಶ್ನಿಸಿದ್ದಾರೆ.
ಅಂಬಾನಿಯಿಂದ ಎಷ್ಟು ಹಣವನ್ನು ತೆಗೆದುಕೊಂಡಿದ್ದಾರೆ ಎಂಬುವುದನ್ನು ಸ್ಪಷ್ಟಪಡಿಸಬೇಕು. ಅಂಬಾನಿ ಮತ್ತು ಅದಾನಿಯನ್ನು ರಾತ್ರೋರಾತ್ರಿ ದುರುಪಯೋಗಪಡಿಸಿಕೊಂಡಿದ್ದೀರಾ? ಐದು ವರ್ಷಗಳ ಕಾಲ ಅವರನ್ನು ನಿಂದಿಸಿದ ನೀವು ರಾತ್ರೋರಾತ್ರಿ ನಿಂದನೆಯನ್ನು ನಿಲ್ಲಿಸಿದ್ದು ಯಾಕೆ? ರಹಸ್ಯ ಒಪ್ಪಂದ ಆಗಿದೆಯೇ ಎಂದು ಪ್ರಶ್ನಿಸಿದ್ದಾರೆ.
ತೆಲಂಗಾಣದಲ್ಲಿ ಗೌತಮ್ ಅದಾನಿ ಹೂಡಿಕೆ ಮಾಡಿದ್ದಾರೆ. ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಗೌತಮ್ ಅದಾನಿ ಜೊತೆ ಒಪ್ಪಂದ ಮಾಡಿದ್ದನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದ್ದಾರೆ.
ವಿಶ್ವ ಆರ್ಥಿಕ ವೇದಿಕೆ-2024 ರಲ್ಲಿ ತೆಲಂಗಾಣ ಸರ್ಕಾರದೊಂದಿಗೆ ಅದಾನಿ ಗ್ರೂಪ್ ಬಹುಕೋಟಿ ರೂಪಾಯಿ ಮೊತ್ತದ ಹೂಡಿಕೆಗೆ ಒಡಂಬಡಿಕೆ ಮಾಡಿಕೊಂಡಿತ್ತು.