ಹೂವಿನ ಕರಗ ಹೊತ್ತು ನಡೆಯುವ ವೇಳೆ ಅಯ ತಪ್ಪಿ ಪೂಜಾರಿ ಕೆಳಗೆ ಬಿದ್ದಿರುವ ಘಟನೆ ನಡೆದಿದೆ. ಆದರೆ, ಕರಗ ಕೆಳಗೆ ಬೀಳದಂತೆ ನೋಡಿಕೊಂಡಿದ್ದಾರೆ.
ನೆಲಕ್ಕೆ ಬೀಳುತ್ತಿದ್ದ ಹೂವಿನ ಕರಗವನ್ನು ಎರಡೂ ಕೈಯಿಂದ ಹಿಡಿದು ಅನಾಹುತ ತಪ್ಪಿಸಿದ್ದಾರೆ. ಕೋಲಾರ ನಗರದ ಪ್ರಸಿದ್ಧ ಕಠಾರಿಪಾಳ್ಯದ ಧರ್ಮರಾಯಸ್ವಾಮಿ ದೇಗುಲದ ಹತ್ತಿರ ಹೂವಿನ ಕರಗ ಹೊತ್ತ ವೇಳೆ ಈ ಘಟನೆ ನಡೆದಿದೆ. ಕುರುಬರ ಪೇಟೆ ಆಂಜನೇಯ ದೇಗುಲದ ಬಳಿ ಹೋಗುತ್ತಿದ್ದ ವೇಳೆ ರಸ್ತೆಯ ಮೇಲ್ಭಾಗದಲ್ಲಿ ಕರಗಕ್ಕೆ ಪೈಪ್ ತಾಕುವ ಸೂಚನೆ ಹಿನ್ನಲೆಯಲ್ಲಿ ಬಗ್ಗಿ ಸಾಗುವಾಗ ಈ ಘಟನೆ ನಡೆದಿದೆ.
ಕೂಡಲೇ ನೆಲಕ್ಕೆ ಉರುಳುತ್ತಿದ್ದ ಕರಗವನ್ನು ಪೂಜಾರಿ ಕೃಷ್ಣಮೂರ್ತಿ ಹಿಡಿದಿದ್ದಾರೆ. ಕರಗ ಬೀಳುತ್ತಿದ್ದ ದೃಶ್ಯ ಕಂಡು ಜನರು ಗಾಬರಿಕೊಂಡಿದ್ದರು. ಈ ವೇಳೆ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.