ಬೆಂಗಳೂರು : ಬಜೆಟ್ ಬೆನ್ನಲ್ಲೇ ಜನ ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಜನರಿಗೆ ಜೇಬಿಗೆ ಕತ್ತರಿ ಬಿದ್ದಿದ್ದು, ದಿನ ನಿತ್ಯ ಬಳಸೋ ದಿನಸಿ ಸಾಮಾಗ್ರಿಗಳ ಬೆಲೆ ಗಗನಕ್ಕೇರಿದೆ. ಅಕ್ಕಿ, ತೊಗರಿ ಬೇಳೆ ಹಾಗೂ ಕಾಳುಗಳು ಸೇರಿದಂತೆ ಹಲವು ದಿನಸಿ ಸಾಮಾಗ್ರಿಗಳ ಬೆಲೆ ಹೆಚ್ಚಳವಾಗಿದ್ದು, ದುಬಾರಿ ದುನಿಯಾದಲ್ಲಿ ಬದುಕ್ತಿರೋ ಜನರಿಗೆ ಇದೀಗ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಯಾವ ಯಾವ ವಸ್ತುಗಳ ಬೆಲೆ ಎಷ್ಟೆಷ್ಟು ಏರಿಕೆ?
ಜನಸಾಮಾನ್ಯರ ದಿನ ಬಳಕೆಯ ಪದಾರ್ಥಗಳ ಮೇಲಿನ ದರ ಏರಿಕೆ ಆಗಿದ್ದು, ಸಗಟು ವ್ಯಾಪಾರದ ದರದಲ್ಲೇ ಭಾರೀ ಏರಿಕೆ ಕಾಣ್ತಿದೆ. ಅಕ್ಕಿ, ತೊಗರಿ ಬೇಳೆ, ಮೆಣಸು ಸೇರಿದಂತೆ ಹಲವು ಪದಾರ್ಥಗಳ ಮೇಲಿನ ದರ ಹೆಚ್ಚಿದೆ. ಸಗಟು ವ್ಯಾಪಾರದಲ್ಲೇ ಅಕ್ಕಿ ಬೆಲೆ 20 ರೂಪಾಯಿ ವರೆಗೆ ಏರಿಕೆ ಆಗಿದ್ದು, ಬಸುಮತಿ ಅಕ್ಕಿ ದರದಲ್ಲಿ 25ರಿಂದ 30 ರೂಪಾಯಿ ವರೆಗೆ ಏರಿಕೆಯಾಗಿದೆ. ಚಿಲ್ಲರೆ ವ್ಯಾಪಾರದಲ್ಲಿ ಸಗಟು ದರಕ್ಕಿಂತ 20% ಹೆಚ್ಚಳವಾಗಿದೆ ಎಂದು ತಿಳಿದುಬಂದಿದೆ.
ಅಕ್ಕಿ : 1 ಕೆಜಿಗೆ 5 ರಿಂದ 30ರೂ.ವರೆಗೆ ಏರಿಕೆ
ಒಣಮೆಣಸು : 1 ಕೆಜಿಗೆ 150 ರೂ. ವರೆಗೆ ಏರಿಕೆ
ತೊಗರಿ ಬೇಳೆ : 1 ಕೆಜಿಗೆ 15 ರಿಂದ 20 ರೂ.ವರೆಗೆ ಏರಿಕೆ
ಕಡಲೆಕಾಯಿ : 1 ಕೆಜಿಗೆ 20 ರೂ.ವರೆಗೆ ಏರಿಕೆ
ಉದ್ದಿನ ಬೇಳೆ : 1 ಕೆಜಿಗೆ 15 ರೂ.ವರೆಗೆ ಏರಿಕೆ
ಕಡಲೆಬೇಳೆ : 1 ಕೆಜಿಗೆ 10 ರೂ. ವರೆಗೆ ಏರಿಕೆ
ಇದನ್ನೂ ಓದಿ : ಅಮೆರಿಕಕ್ಕೆ 500 ಶತಕೋಟಿ ಡಾಲರ್ ಆಫರ್ ನೀಡಿದೆಯೇ ಭಾರತ? ಟ್ರಂಪ್ ಹೇಳಿಕೆಯಲ್ಲಿ ಸತ್ಯವಿದೆಯೇ?



















