ಬೆಂಗಳೂರು: ಕಳೆದೆರಡು ದಿನಗಳಿಂದ ಇಳಿಕೆಯ ಹಾದಿ ಹಿಡಿದಿದ್ದ ಚಿನ್ನ ಮಂಗಳವಾರ ಏಕಾಏಕಿ ದಿಢೀರ್ ಏರಿಕೆ ಕಂಡಿದೆ.
ಇಂದಿನ ಬೆಲೆ ಎಷ್ಟು?
ದೇಶೀಯ ಮಾರುಕಟ್ಟೆಯಲ್ಲಿ ಫೆಬ್ರವರಿ 4 ರಂದು ರಂದು 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆಯಲ್ಲಿ 105 ರೂ. ಏರಿಕೆ ಆಗಿದೆ. ಹೀಗಾಗಿ ಇಂದಿನ ಬೆಲೆ 1 ಗ್ರಾಂ ಗೆ 7,810 ರೂ ಇದೆ. 24 ಕ್ಯಾರೆಟ್ ಚಿನ್ನದ ಬೆಲೆ 115 ರೂ ಏರಿಕೆ ಆಗಿದ್ದು, 1 ಗ್ರಾಂ ಚಿನ್ನದ ಬೆಲೆ 8,520 ರೂ. ಆಗಿದೆ.
10 ಗ್ರಾಂ ಬೆಲೆ ಎಷ್ಟು?
22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 78,100 ರೂ ಇದ್ದು, 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 85,200 ರೂ ಆಗಿದೆ. ಮಂಗಳವಾರಕ್ಕೆ ಚಿನ್ನದ ದರದಲ್ಲಿ 1,150 ರೂ ಏರಿಕೆ ಆಗಿದೆ.
ಬೆಂಗಳೂರಿನ ಚಿನ್ನದ ಬೆಲೆ
ಬೆಂಗಳೂರಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 7,810 ರೂ. ಗೆ ಏರಿದೆ. ಬೆಳ್ಳಿಯ ಬೆಲೆ ಇಳಿಕೆ ಆಗಿದ್ದು 98.50 ಪೈಸೆ ಆಗಿದೆ. ಕೆಜಿ ಬೆಳ್ಳಿಯ ಬೆಲೆ 98,500 ರೂ. ಇದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 7,810, 24 ಕ್ಯಾರೆಟ್ ಚಿನ್ನದ ಬೆಲೆ 8,520 ರೂ. ಇದೆ. ಇನ್ನುಳಿದಂತೆ ಚೆನ್ನೈ ಕ್ರಮವಾಗಿ 7,810ರೂ., 8,520 ರೂ. ಇದೆ. ಕೇರಳ 7,810 ರೂ, 8,520 ರೂ. ಇದೆ. ದೆಹಲಿ 7,825 ರೂ., 8,535 ರೂ. ಇದೆ. ಹೈದರಾಬಾದ್ 7,810 ರೂ., 8,520 ರೂ. ಇದೆ. ಕೋಲ್ಕತ್ತಾ 7,810 ರೂ., 8,520 ರೂ. ಇದೆ. ಮುಂಬಯಿ 7,810 ರೂ., 8,520 ರೂ. ಇದೆ.
ಜನವರಿ 1 ರಂದು 7,150 ರೂ ನಷ್ಟಿದ್ದ ಚಿನ್ನದ ಬೆಲೆ ಜನವರಿ 31ಕ್ಕೆ 7,731 ರೂ ಆಗಿತ್ತು. ಫೆಬ್ರವರಿ ತಿಂಗಳ ಮೊದಲ ವಾರದಲ್ಲೇ ಮತ್ತೆ ಏರಿಕೆಯತ್ತ ಮುಖ ಮಾಡಿದೆ. ಹೀಗಾಗಿ ಬಂಗಾರ ಪ್ರಿಯರಿಗೆ ಇದು ನುಂಗಲಾರದ ತುತ್ತಾಗಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಹಾಗೂ ಡಾಲರ್ ಎದುರು ಮೌಲ್ಯ ಆಧರಿಸಿ, ಆಯಾ ದಿನದ ಬಂಗಾರ ಹಾಗೂ ಬೆಳ್ಳಿಯ ಬೆಲೆಯು ನಿರ್ಧಾರ ಆಗುತ್ತದೆ.