ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವಿವಾಹ ಆಗೋದು ಅಧಿಕೃತ ಆಗಿದೆ. ಸ್ವತಃ ರಶ್ಮಿಕಾ ಮಂದಣ್ಣ ಅವರೇ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಈ ಮಧ್ಯೆ ದಂಪತಿಗಳು ಪ್ರೀ ವೆಡ್ಡಿಂಗ್ ಸೆಲಬ್ರೇಷನ್ ಅಲ್ಲಿ ತೊಡಗಿಕೊಂಡಿದ್ದಾರೆ. ಈ ಸಂದರ್ಭದ ವಿಡಿಯೋ ಹಾಗೂ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಇದು ಅಭಿಮಾನಿಗಳಿಗೆ ಖುಷಿ ತಂದಿದೆ.
ತಮ್ಮ ಜೋಡಿಯನ್ನು ವಿರೋಶ್ ಎಂದು ಕರೆದುಕೊಂಡಿದ್ದಾರೆ ರಶ್ಮಿಕಾ ಹಾಗೂ ವಿಜಯ್. ಇದು ಅಭಿಮಾನಿಗಳೇ ಇಟ್ಟ ಹೆಸರು ಎಂದು ಅವರು ಹೇಳಿದ್ದಾರೆ. ಈಗಾಗಲೇ ಭಾವಿ ದಂಪತಿಗಳು ಉದಯಪುರ ಸೇರಿದ್ದು, ಅಲ್ಲಿ ವಿವಾಹ ಪೂರ್ವ ಕಾರ್ಯಕ್ರಮಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಇಡೀ ಕುಟುಂಬ ಈಗಾಗಲೇ ಅಲ್ಲಿ ನೆಲೆಯೂರಿದೆ. ನೀರಿನಲ್ಲಿ ನೆಟ್ ಕಟ್ಟಿ ಕುಟುಂಬದವರ ಜೊತೆ ವಿಜಯ್ ದೇವರಕೊಂಡ ವಾಲಿಬಾಲ್ ಆಡಿದ್ದಾರೆ. ಈ ಸಂದರ್ಭದ ಫೋಟೋನ ಇನ್ಸ್ಟಾದಲ್ಲಿ ಹಂಚಿ ಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಜಾಪನೀಸ್ ಡಿನ್ನರ್ ಆಯೋಜನೆ ಮಾಡಿದ್ದರು. ಈ ಸಂದರ್ಭದ ಫೋಟೋನ ಹಂಚಿಕೊಳ್ಳಲಾಗಿದೆ. ಇದರಲ್ಲಿ ಜಾಪನೀಸ್ ಅಡುಗೆ ಊಟ ಇರುವ ಮೆನ್ಯು ಸಾಕಷ್ಟು ಗಮನ ಸೆಳೆದಿದೆ. ರಶ್ಮಿಕಾ ಮಂದಣ್ಣ ಅವರ ಮೆನ್ಯು ಕಾರ್ಡ್ ಬಳಿ ಗ್ರೀನ್ ಆ್ಯಪಲ್ ಹಾಗೂ ದ್ರಾಕ್ಷಿಗಳನ್ನು ಇಡಲಾಗಿದೆ.
ಇದನ್ನೂ ಓದಿ : ‘ಮುದ್ದುಸೊಸೆ’ ಭಾರೀ ಟ್ವಿಸ್ಟ್..?



















