ಬೆಂಗಳೂರು: ನಮ್ಮದು ಬಡವರ ಪರ ಸರ್ಕಾರ. ನಮ್ಮ ಪಕ್ಷದಿಂದ ಯಾವ ಬಡವರಿಗೆ ಯಾವತ್ತೂ ಅನ್ಯಾಯವಾಗುವುದಿಲ್ಲ. ಇದಕ್ಕೆ ಐದು ಗ್ಯಾರಂಟಿಗಳೇ ಕಾರಣ. ನಾವಿರುವುದೇ ಬಡವರಿಗಾಗಿ. ಬಡವರ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಮತ್ತೆ ಮರಳಿಸುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡವರ ಕಾರ್ಡ್ ಗಳು ರದ್ದಾಗಿದ್ದರೆ, ಅವರನ್ನು ಗುರುತಿಸಿ ಮರಳಿ ನೀಡುತ್ತೇವೆ. ಏನಾದರೂ ಲೋಪವಾದರು ಸರಿ ಮಾಡುತ್ತೇವೆ. ಯಾರೂ ಆತಂಕ ಪಡಬಾರದು. ಕೆಲವು ಸರ್ಕಾರಿ ನೌಕರರಸ್ಥರು ಕಾರ್ಡ್ ಹೊಂದಿದ್ದಾರೆ. ಹೀಗಾಗಿ ಅವರ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತಿದೆ ಎಂದಿದ್ದಾರೆ.
ರೈತರ ಹೈನುಗಾರಿಕೆಗೆ ಹೆಚ್ಚು ಪ್ರಾಶಸ್ತ್ಯ ನೀಡುವ ನಿಟ್ಟಿನಲ್ಲಿ ನಂದಿನಿ ಹಾಲಿನ ಮಾರುಕಟ್ಟೆಯನ್ನು ದೆಹಲಿಯಲ್ಲೂ ವಿಸ್ತರಿಸುತ್ತಿದ್ದೇವೆ. ಹೀಗಾಗಿ ಸಿಎಂ ದೆಹಲಿ ಪ್ರವಾಸ ಮಾಡುತ್ತಿದ್ದಾರೆ. ನಾನು ಕೂಡ ಇದಕ್ಕೆ ತೆರಳಬೇಕಾಗಿತ್ತು. ಆದರೆ ನಾಳೆ ಮೀನುಗಾರರ ದಿನ ಕಾರ್ಯಕ್ರಮ ಇರುವುದರಿಂದ ನಾನು ಮುರುಡೇಶ್ವರಕ್ಕೆ ತೆರಳುತ್ತಿದ್ದೇನೆ ಎಂದಿದ್ದಾರೆ.