ಬೆಂಗಳೂರು: ರೇಣುಕಾಸ್ವಾಮಿ ಕೊಲೆ ನಡೆದಿದ್ದ ಶೆಡ್‌ಗೆ (Pattanagere Shed) ಬೀಗ ಜಡಿಯಲಾಗಿದೆ.
ಫೈನಾನ್ಸ್ ನಲ್ಲಿ ಹಣ ಕಟ್ಟದೇ ಸೀಜ್ ಆದ ವಾಹನಗಳನ್ನ (Seized Vehicles) ಬಿಡಿಸಿಕೊಳ್ಳಲು ನಿತ್ಯ ಜನರು ಈ ಶೆಡ್ ಗೆ ಬರುತ್ತಿದ್ದರು. ಆದರೆ, ವಾಹನಗಳನ್ನು ಬಿಡಿಸಿಕೊಳ್ಳಲಾಗದೆ ಮರಳುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿವೆ. ಬೆಂಗಳೂರಿನ ಆರ್‌ಆರ್ ನಗರದ (Bengaluru RR Nagar) ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿಯನ್ನ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಲಾಗಿದೆ ಎನ್ನಲಾಗಿದೆ.
ಈ ಶೆಡ್ ನ್ನು ಬಾಡಿಗೆಗೆ ಪಡೆದು ಫೈನಾನ್ಸ್ ಕಂಪನಿ (Finance Company) ನಿರ್ವಹಣೆ ಮಾಡುತ್ತಿದ್ದು, ಫೈನಾನ್ಸ್ ನಲ್ಲಿ ವಾಹನಗಳನ್ನ ಖರೀದಿಸಿ, ಕಟ್ಟಲು ಆಗದೆ ಇದ್ದ ವಾಹನಗಳನ್ನ ಸೀಜ್ ಮಾಡಿ ಇದೇ ಶೆಡ್‌ನಲ್ಲಿ ತುಂಬಿಸಲಾಗುತ್ತದೆ. ನೂರಾರು ಬೈಕ್‌ಗಳು, ಆಟೋ, ಕಾರು, ಲಾರಿ, ಇತರೆ ವಾಹನಗಳಿವೆ. ಆದರೆ, ಈಗ ರೇಣುಕಾಸ್ವಾಮಿ ಕೊಲೆ ವಿಚಾರಣೆ ಹಾಗೂ ಸಾಕ್ಷ್ಯ ನಾಶ ಆಗಬಾರದೆಂಬ ಕಾರಣಕ್ಕೆ ಪೊಲೀಸರು ಶೆಡ್ ಗೆ ಬೀಗ ಹಾಕಿದ್ದಾರೆ. ಹೀಗಾಗಿ ವಾಹನ ಬಿಡಿಸಿಕೊಳ್ಳಲು ಬರುತ್ತಿರುವವರು ಬರಿಗೈಯಲ್ಲಿ ಮರಳುತ್ತಿದ್ದಾರೆ.