ಬೆಂಗಳೂರು: ರಾಜ್ಯದ ಜನರಿಗೆ ಮತ್ತೊಂದು ಶಾಕ್ ಎದುರಾಗಲಿದೆ. ಸದ್ಯದಲ್ಲೇ ರಾಜ್ಯದ ಜನರು ಕರೆಂಟ್ ಶಾಕ್ ಗೆ ಒಳಗಾಗಲಿದ್ದಾರೆ.
ಈಗಾಗಲೇ ವಿದ್ಯುತ್ ದರ ಏರಿಕೆ ಮಾಡಲು ಬೆಸ್ಕಾಂ ಸಿದ್ಧತೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಬೆಸ್ಕಾಂ ಕಚೇರಿಯಲ್ಲಿ ಎಂ.ಡಿ. ಶಿವಶಂಕರ ನೇತೃತ್ವದಲ್ಲಿ ಸಭೆ ನಡೆದಿದೆ. ಈ ಸಭೆಯಲ್ಲಿ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಫೆ. 17ರಂದು ಕೆಇಆರ್ ಸಿ ವಿದ್ಯುತ್ ಪರಿಷ್ಕರಣೆ ಪರಿಶೀಲನೆ ಕುರಿತು ಸಭೆ ನಡೆಸಲಾಗಿದೆ. ಈಗಾಗಲೇ ವಿದ್ಯುತ್ ದರ ಏರಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಫೆ. 17ರಂದು ನಡೆಯಲಿರುವ ಸಭೆಯಲ್ಲಿ ಕೆಇಆರ್ ಸಿ ಸ್ಪಷ್ಟನೆ ಕೇಳಲಿದೆ. ಹೀಗಾಗಿ ಬೆಸ್ಕಾಂ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆದಿದೆ.
ದರ ಏರಿಕೆ ಕುರಿತು ಕೂಡ ನಿರ್ಧಾರ ಕೈಗೊಳ್ಳಲಾಗಿದ್ದು, ಏ. 1ರಿಂದ ವಿದ್ಯುತ್ ದರ ಪರಿಷ್ಕರಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.