ಬೆಂಗಳೂರು: 18 ಶಾಸಕರನ್ನು ಸಸ್ಪೆಂಡ್ ಮಾಡಿರುವ ವಿಷಯವವಾಗಿ ವಿಧಾನಸೌಧದ ಅವರಣದಲ್ಲಿ ಮಾಧ್ಯಮಗಳೊಂದಿಗೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿದ್ದಾರೆ.
ಬಜೆಟ್ ಅಧಿವೇಶನ (Budget Session) ಬಹಳ ಚೆನ್ನಾಗಿ ನಡೆಯುತ್ತಿತ್ತು, 80ಕ್ಕೂ ಹೆಚ್ಚು ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದರು. ಆದರೆ, ಈ ವೇಳೆ ನಡೆದ ಘಟನೆ ಅತ್ಯಂತ ವಿಷಾದಕರ, ತಾನು ಸಭಾಧ್ಯಕ್ಷನಾಗಿ ಸಂವಿಧಾನದ ಪರ ನಿಂತಿದ್ದೇನೆ. ಅದರ ಆಶಯದಂತೆ ನಡೆದುಕೊಂಡಿದ್ದೇನೆ. ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಅರೋಪ ಪ್ರತ್ಯಾರೋಪ ಸಾಮಾನ್ಯ ಎಂದು ಹೇಳಿದ್ದಾರೆ.