2024ರ ಪ್ಯಾರಾಲಿಂಪಿಕ್ಸ್ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಆಟಗಾರರು ಪ್ರಯಾಣ ಬೆಳೆಸಿದ್ದಾರೆ. ಇತ್ತೀಚೆಗಷ್ಟೇ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತದ ಆಟಗಾರರು 1 ಬೆಳ್ಳಿ ಮತ್ತು 5 ಕಂಚಿನ ಪದಕ ಸೇರಿದಂತೆ 6 ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಈಗ ಪ್ಯಾರಿಸ್ ನಲ್ಲಿ ಆಗಸ್ಟ್ 28 ರಿಂದ ಆರಂಭವಾಗಲಿರುವ ಪ್ಯಾರಾಲಿಂಪಿಕ್ಸ್ ಗೆ ಬಾರತೀಯರ ತಂಡ ತೆರಳಿದೆ.
ಪ್ಯಾರಾಲಿಂಪಿಕ್ಸ್ನಲ್ಲಿ 207 ದೇಶಗಳಿಂದ ಸುಮಾರು 4,400 ಅಥ್ಲೀಟ್ ಗಳು ಭಾಗವಹಿಸಲಿದ್ದು, ವಿವಿದ ಕ್ರೀಡೆಗಳಲ್ಲಿ 549 ಚಿನ್ನದ ಪದಕಗಳನ್ನು ವಿತರಿಸಲಾಗುತ್ತದೆ. ಈ ಕ್ರೀಡಾಕೂಟಕ್ಕೆ ಭಾರತದ ತಂಡವೂ ಕೂಡ ಭಾಗವಹಿಸಲು ಪ್ಯಾರಿಸ್ ಗೆ ತೆರಳಿದೆ. ಭಾರತೀಯ ಪ್ಯಾರಾಲಿಂಪಿಕ್ ಸಮಿತಿಯ ಅಧ್ಯಕ್ಷ ದೇವೇಂದ್ರ ಜಜಾರಿಯಾ ಮತ್ತು ಮಿಷನ್ ಮುಖ್ಯಸ್ಥ ಸತ್ಯ ಪ್ರಕಾಶ್ ಸಾಂಗ್ವಾನ್ ನೇತೃತ್ವದ 179 ಸದಸ್ಯರ ತಂಡ ( 84 ಸ್ಪರ್ಧಿಗಳು ಮತ್ತು ಅಧಿಕಾರಿಗಳು ಸೇರಿದಂತೆ) ಇಂದು ಪ್ಯಾರಿಸ್‌ಗೆ ತೆರಳಿದೆ.
ಈ ಬಾರಿ ದೇಶದಿಂದ ಒಟ್ಟು 84 ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಭಾರತೀಯ ತುಕಡಿಯು ಒಟ್ಟು 179 ಸದಸ್ಯರನ್ನು ಒಳಗೊಂಡಿದೆ. ಈ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತವು 12 ಕ್ರೀಡೆಗಳಲ್ಲಿ ಭಾಗವಹಿಸಲಿದ್ದು, 84 ಆಟಗಾರರು ಪದಕಕ್ಕಾಗಿ ಸೆಣಸಾಟ ನಡೆಸಲಿದ್ದಾರೆ.
2021ರಲ್ಲಿ ನಡೆದ ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ 54 ಆಟಗಾರರು ಒಂಬತ್ತು ಕ್ರೀಡೆಗಳಲ್ಲಿ ಭಾಗವಹಿಸಿದ್ದರು. 2021 ರಲ್ಲಿ ನಡೆದಿದ್ದ ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತವು 19 ಪದಕಗಳನ್ನು (ಐದು ಚಿನ್ನ, ಎಂಟು ಬೆಳ್ಳಿ, ಆರು ಕಂಚು) ಗೆದ್ದ ಸಾಧನೆ ಮಾಡಿತ್ತು. ಈ ಬಾರಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಭರವಸೆ ಇದೆ.