ಹಾಸನ: ವೃದ್ಧ ವ್ಯಕ್ತಿಯ ಮೇಲೆ ಏಕಾಏಕಿ ದಾಳಿ ನಡೆಸಿರುವ ಕಾಡಾನೆಯೊಂದು (Elephant) ಕೊಂದು ಹಾಕಿ, ಶವದ ಮೇಲೆ ಕಾಫಿ ಗಿಡ ಮುಚ್ಚಿ, ಬಚ್ಚಿಟ್ಟ ಘಟನೆ ನಡೆದಿದೆ.
ಈ ಘಟನೆ ಆಲೂರು ತಾಲೂಕಿನ ಅಡಿಬೈಲು ಗ್ರಾಮದಲ್ಲಿ ನಡೆದಿದೆ. ಕಾಡಾನೆ ದಾಳಿಗೆ ಬಲಿಯಾದ ವೃದ್ಧರನ್ನು ಪುಟ್ಟಯ್ಯ (78) ಎಂದು ಗುರುತಿಸಲಾಗಿದೆ. ಮಗ್ಗೆ ಗ್ರಾಮದಿಂದ ಅಡಿಬೈಲು ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಕಾಡಾನೆ ವೃದ್ಧ ವ್ಯಕ್ತಿಯನ್ನು ಕಾಲಿನಿಂದ ತುಳಿದು ಮರಕ್ಕೆ ಅಪ್ಪಳಿಸಿದೆ. ಪರಿಣಾಮ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಂತರ ಆನೆ ಶವಕ್ಕೆ ಕಾಫಿ ಗಿಡಗಳನ್ನು ಮುಚ್ಚಿ ಹೋಗಿದೆ. ಬುಧವಾರ ಬೆಳಗ್ಗೆ ಕಾಫಿ ತೋಟದಲ್ಲಿ ಪುಟ್ಟಯ್ಯ ಶವ ಪತ್ತೆಯಾಗಿದೆ.