ಬೀದರ್ : ಮನೆಗಳ್ಳತನಕ್ಕೆ ಯತ್ನಿಸಿದ ಖದೀಮರು ಸಿಸಿಟಿವಿ ಕಣ್ಣಿಗೆ ಬೀಳುತ್ತಿದ್ದಂತೆ ಎಸ್ಕೇಪ್ ಆಗಿರುವ ಘಟನೆ ನಡೆದಿದೆ.
ಬೀದರ್ ತಾಲೂಕಿನ ಅಷ್ಟೂರ ಗ್ರಾಮದಲ್ಲಿ ಜೂ. 27ರಂದು ರಾತ್ರಿ ಈ ಘಟನೆ ನಡೆದಿದೆ. ಗ್ರಾಮದ ವೈಜಿನಾಥ್ ಎಂಬುವವರ ಮನೆ ಗೇಟ್ ಹಾರಿ ಇಬ್ಬರು ಖದೀಮರು ಮನೆಗೆ ನುಗ್ಗಿದ್ದರು. ಆದರೆ, ಮನೆಯಲ್ಲಿ ಸಿಸಿಟಿವಿ ಇರುವುದನ್ನು ಗಮನಿಸಿ ಪರಾರಿಯಾಗಿದ್ದಾರೆ.
ಈ ವೇಳೆ ವೇಳೆ ಕಳ್ಳರು ಮನೆಯಲ್ಲಿದ್ದ 2 ಮೊಬೈಲ್ ಗಳನ್ನು ಕದ್ದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಬೀದರ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.