ಬೆಂಗಳೂರು : ರಾಜಧಾನಿಬೆಂಗಳೂರಲ್ಲಿ ಬೀದಿ ನಾಯಿಗಳ ಹಾವಳಿ ದಿನೇದಿನೇ ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ. ಪಾದಚಾರಿಗಳು ಹಾಗೂ ವಾಹನ ಸವಾರರ ಮೇಲೆ ಬೀದಿ ನಾಯಿಗಳು ದಾಳಿ ನಡೆಸುತ್ತಿರುವ ಘಟನೆಗಳು ವರದಿಯಾಗಿದೆ.
ಮೊನ್ನೆ ಲಗ್ಗೆರೆ ಪ್ರದೇಶದಲ್ಲಿ ನಡೆದ ದಾಳಿಯ ಬೆನ್ನಲ್ಲೇ, ನಿನ್ನೆ ಆನೇಕಲ್ ತಾಲ್ಲೂಕಿನ ಚಂದ್ರಾಪುರ ಸಮೀಪದ ಸೂರ್ಯಸಿಟಿ ಫೇಸ್–1 ಲೇಔಟ್‌ನಲ್ಲಿ ಮತ್ತೊಂದು ಘಟನೆ ಸಂಭವಿಸಿದೆ. ಬೆಳಗ್ಗೆ ಸುಮಾರು 8 ಗಂಟೆ ಸುಮಾರಿಗೆ ಐದಾರು ಬೀದಿ ನಾಯಿಗಳ ಗುಂಪು ಪಾದಚಾರಿಯ ಮೇಲೆ ದಾಳಿ ನಡೆಸಿದೆ.
ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಪಾದಚಾರಿ ಹರಸಾಹಸಪಟ್ಟಿದ್ದು, ಅದೇ ವೇಳೆ ಬೈಕ್ ಸವಾರನ ಮೇಲೂ ನಾಯಿಗಳ ಗುಂಪು ದಾಳಿ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯರು ಭಯಭೀತರಾಗಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ಸಂಪೂರ್ಣ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ದೃಶ್ಯಗಳು ಇದೀಗ ವೈರಲ್ ಆಗಿವೆ. ಬೀದಿ ನಾಯಿಗಳ ಉಪಟಳದಿಂದ ಹೈರಾಣಾಗಿರುವ ಸಾರ್ವಜನಿಕರು, ನಗರ ಪಾಲಿಕೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಪ್ರವಾಸಿಗರ ಜೀವದ ಜೊತೆ ಖಾಸಗಿ ಬಸ್ ಸಿಬ್ಬಂದಿಗಳ ಚೆಲ್ಲಾಟ : ಸ್ಥಳೀಯರ ಆಕ್ರೋಶ



















