ಬೆಂಗಳೂರು: ನಿಸ್ಸಾನ್ ಕಂಪನಿಯು ತನ್ನ ಹೊಸ ನಿಸ್ಸಾನ್ ಮ್ಯಾಗ್ನೈಟ್ (Nissan Magnite) ಬಿಆರ್10 ಎಂಜಿನ್ ಈಗ ಇ20 ಸಾಮರ್ಥ್ಯವನ್ನು ಹೊಂದಿದೆ ಎಂದು ಘೋಷಿಸಿದೆ. ಈ ಮೂಲಕ ಈ ಎಂಜಿನ್ 2024ರ ಆಗಸ್ಟ್ ನಲ್ಲಿ ಇ20 ಸಾಮರ್ಥ್ಯ ಗಳಿಸಿದ 1.0ಲೀ ಹೆಚ್ಆರ್10 ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಸಾಲಿಗೆ ಈ ಎಂಜಿನ್ ಕೂಡ ಸೇರಿಕೊಂಡಿದ್ದು, ಈ ಮೂಲಕ ಹೊಸ ನಿಸ್ಸಾನ್ ಮ್ಯಾಗ್ನೈಟ್ ನ ಎಲ್ಲಾ ಪವರ್ ಟ್ರೇನ್ ಆಯ್ಕೆಗಳು ಇ20 ಸಾಮರ್ಥ್ಯ ಗಳಿಸಿದಂತಾಗಿದೆ.
ಇದಲ್ಲದೇ ನಿಸ್ಸಾನ್ ಮೋಟರ್ ಇಂಡಿಯಾ ತನ್ನ ಮ್ಯಾಗ್ನೈಟ್ ನ 50,000 ಯೂನಿಟ್ ಗಳನ್ನು ರಫ್ತು ಮಾಡುವ ಮೂಲಕ ಮಹತ್ವದ ಸಾಧನೆ ಮಾಡಿದೆ. ಸಂಸ್ಥೆಯ ಹೊಸ ತಂತ್ರಗಳ ಕಾರಣದಿಂದ ಹೊಸ ನಿಸ್ಸಾನ್ ಮ್ಯಾಗ್ನೈಟ್ ನ ದೇಶೀಯ ಮತ್ತು ರಫ್ತು ಮಾರಾಟ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಉಂಟಾಗಿದೆ. ಅಲ್ಲದೇ ಕಂಪನಿಯು ಭಾರತವನ್ನು ಕಂಪನಿಯ ಪ್ರಮುಖ ರಫ್ತು ಕೇಂದ್ರವನ್ನಾಗಿ ಮಾಡಿಕೊಂಡಿದೆ. ಜನವರಿ 2025ರಲ್ಲಿ ಮೊದಲ ಬಾರಿಗೆ ರವಾನೆಯಾದ ಲೆಫ್ಟ್ ಹ್ಯಾಂಡ್ ಡ್ರೈವ್ ವೇರಿಯೆಂಟ್ ಮೂಲಕ ರಫ್ತು ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ.
News | Nissan | Official
— Sunderdeep – Volklub (@volklub) March 4, 2025
Nissan Magnite Now Fully E20 Compatible, Crosses 50,000 Exports
✅ Magnite BR10 (NA engine) is now E20 compliant, making both powertrains fully E20 ready.
✅ Magnite achieves 50,000 export units milestone, covering both LHD & RHD markets.
✅ February… pic.twitter.com/Qa9Rev62K7
2025ರ ಫೆಬ್ರವರಿಯಲ್ಲಿ ನಿಸ್ಸಾನ್ ನ ಒಟ್ಟು 8,567 ಯುನಿಟ್ ಗಳು ಮಾರಾಟವಾಗಿದೆ. ರಫ್ತು ಪ್ರಮಾಣ ಹೆಚ್ಚಳದಿಂದ ಈ ಸಾಧನೆ ಸಾಧ್ಯವಾಗಿದೆ. ದೇಶೀಯವಾಗಿ 2,328 ಯೂನಿಟ್ ಗಳನ್ನು ಮಾರಾಟ ಮಾಡಲಾಗಿದ್ದು, ಒಟ್ಟು 6,239 ಯೂನಿಟ್ ಗಳನ್ನು ರಫ್ತು ಮಾಡಲಾಗಿದೆ. 2024ರ ಫೆಬ್ರವರಿಯಲ್ಲಿ ರಫ್ತು ಮಾಡಲಾದ 3,163 ಯೂನಿಟ್ ಗಳಿಗೆ ಹೋಲಿಸಿದರೆ ಶೇ.97 ಅಭಿವೃದ್ಧಿ ಸಾಧಿಸಲಾಗಿದೆ.
ಹೊಸ ನಿಸ್ಸಾನ್ ಮ್ಯಾಗ್ನೈಟ್ ಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಿಸ್ಸಾನ್ ನ ಪ್ರಭಾವ ಹೆಚ್ಚುತ್ತಿರುವುದನ್ನು ಮತ್ತು ‘ಮೇಡ್ ಇನ್ ಇಂಡಿಯಾ’ ವಾಹನಗಳಿಗೆ ಆದ್ಯತೆ ಹೆಚ್ಚುತ್ತಿರುವುದನ್ನು ತೋರಿಸಿಕೊಟ್ಟಿದೆ.
ಈ ಕುರಿತು ಮಾತನಾಡಿದ ನಿಸ್ಸಾನ್ ಮೋಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಶ್ರೀ ಸೌರಭ್ ವತ್ಸಾ ಅವರು, “ಹೊಸ ನಿಸ್ಸಾನ್ ಮ್ಯಾಗ್ನೈಟ್ ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕ ಮಾರುಕಟ್ಟೆಗಳಲ್ಲಿಯೂ ತನ್ನ ಛಾಪನ್ನು ಮೂಡಿಸಿದ್ದು, ಇದುವರೆಗೆ 50,000 ಯುನಿಟ್ ಗಳನ್ನು ರಫ್ತು ಮಾಡಲಾಗಿದೆ. ಈ ಮೂಲಕ ಮಹತ್ವದ ಸಾಧನೆ ಮಾಡಲಾಗಿದೆ. ಉತ್ತಮ ಗುಣಮಟ್ಟ, ನಾವೀನ್ಯತೆ ಮತ್ತು ಕಾರ್ಯಕ್ಷಮತೆಯನ್ನು ಒದಗಿಸುವ ನಿಸ್ಸಾನ್ ನ ಸಾಮರ್ಥ್ಯದ ಮೇಲೆ ವಿಶ್ವಾಸ ಬೆಳೆಯುತ್ತಿರುವುದನ್ನು ಈ ಬೆಳವಣಿಗೆ ತೋರಿಸಿಕೊಟ್ಟಿದೆ. ಅಲ್ಲದೇ ಹೊಸ ನಿಸ್ಸಾನ್ ಮ್ಯಾಗ್ನೈಟ್ ಇ20 ಸಾಮರ್ಥ್ಯ ಗಳಿಸಿದ್ದು, ಭವಿಷ್ಯಕ್ಕೆ ಪೂರಕವಾಗ ಸಾರಿಗೆ ಉತ್ಪನ್ನಗಳನ್ನು ಒದಗಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: Donald Trump: ಕೂಡಲೇ ಉಳಿದ ಒತ್ತೆಯಾಳುಗಳ ಬಿಡುಗಡೆ ಮಾಡಿ, ಇಲ್ಲದಿದ್ದರೆ ನಿಮ್ಮ ಸಾವು ಖಚಿತ: ಹಮಾಸ್‌ಗೆ ಟ್ರಂಪ್ ವಾರ್ನಿಂಗ್!
2025ರ ಜನವರಿಯಲ್ಲಿ ನಿಸ್ಸಾನ್ ಮೋಟಾರ್ ಇಂಡಿಯಾ ಹೊಸ ನಿಸ್ಸಾನ್ ಮ್ಯಾಗ್ನೈಟ್ ನ ಲೆಫ್ಟ್ ಹ್ಯಾಂಡ್ ವೇರಿಯೆಂಟ್ ನ ರಫ್ತು ಆರಂಭಿಸಿತು. ಚೆನ್ನೈನ ಕಾಮರಾಜರ್ ಬಂದರಿನಿಂದ ಲ್ಯಾಟಮ್ ಮಾರುಕಟ್ಟೆಗಳಿಗೆ ಸುಮಾರು 2,900 ಯೂನಿಟ್ ಗಳನ್ನು ರವಾನಿಸಲಾಗಿತ್ತು. ನಂತರ ಫೆಬ್ರವರಿ ತಿಂಗಳಲ್ಲಿ ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ ಮತ್ತು ಏಷ್ಯಾ ಪೆಸಿಫಿಕ್ ಪ್ರದೇಶಗಳಿಗೆ 2,000ಕ್ಕೂ ಹೆಚ್ಚು ಯೂನಿಟ್‌ಗಳು ಮತ್ತು ಆಯ್ದ ಲ್ಯಾಟಿನ್ ಅಮೆರಿಕನ್ ಮಾರುಕಟ್ಟೆಗಳಿಗೆ 5,100ಕ್ಕೂ ಹೆಚ್ಚು ಲೆಫ್ಟ್ ಹ್ಯಾಂಡ್ ಡ್ರೈವ್ ವೇರಿಯೆಂಟ್ ಅನ್ನು ರವಾನಿಸಲಾಯಿತು. ಫೆಬ್ರವರಿ ಅಂತ್ಯದ ವೇಳೆಗೆ ಒಟ್ಟು 10,000ಕ್ಕೂ ಹೆಚ್ಚು LHD ಮ್ಯಾಗ್ನೈಟ್ ಯೂನಿಟ್ ಗಳ ರವಾನೆಯಾಗಿದೆ. ಹೊಸ ನಿಸ್ಸಾನ್ ಮ್ಯಾಗ್ನೈಟ್ ಈಗ 65ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ.