ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ (BJP)ಜಿಲ್ಲಾಧ್ಯಕ್ಷರ ಬದಲಾವಣೆ ನಡೆಯುತ್ತಿದ್ದು, ಬೆಂಗಳೂರು ಉತ್ತರ ಮತ್ತು ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರ ಹೆಸರನ್ನು ಅಂತಿಮಗೊಳಿಸಲಾಗಿದೆ.
ಉತ್ತರ ಜಿಲ್ಲಾಧ್ಯಕ್ಷರಾಗಿ ಎಸ್. ಹರೀಶ್,(S. Harish) ಕೇಂದ್ರ ಜಿಲ್ಲಾಧ್ಯಕ್ಷರಾಗಿ ಸಪ್ತಗಿರಿ ಗೌಡ(Saptagiri Gowda) ಆಯ್ಕೆಯಾಗಿದ್ದಾರೆ. ಮೂರು ವರ್ಷಗಳ ಅವಧಿಗೆ ಚುನಾಯಿತ ಅಧ್ಯಕ್ಷರಾಗಿ ಹರೀಶ್ ಮತ್ತು ಸಪ್ತಗಿರಿ ಗೌಡ ಅವರನ್ನು ಆಯ್ಕೆ ಮಾಡಲಾಗಿದೆ.
ಚುನಾವಣಾಧಿಕಾರಿಗಳಾಗಿ ಗೋಪಿನಾಥ್ ರೆಡ್ಡಿ ಮತ್ತು ರವಿಸುಬ್ರಮಣ್ಯ (Ravisubramanya) ಅವರಿದ್ದರು. ಅಂತಿಮವಾಗಿ ಹೆಸರನ್ನು ಘೋಷಿಸಿದರು.
ಚುನಾವಣಾ ರಾಜ್ಯ ಸಂಚಾಲಕ ಎನ್. ರವಿಕುಮಾರ್,(N. Ravikumar) ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಕೂಡ ಈ ಸಂದರ್ಭದಲ್ಲಿದ್ದರು. ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ನಗರ ಕಚೇರಿಯಲ್ಲಿ ಹೆಸರು ಅಂತಿಮಗೊಳಿಸಲಾಯಿತು. ಆದರೆ, ಎರಡೂ ಜಿಲ್ಲಾಧ್ಯಕ್ಷರ ಘೋಷಣೆ ವೇಳೆ ಬೆಂಗಳೂರು ಉತ್ತರ ಮತ್ತು ಕೇಂದ್ರ ಜಿಲ್ಲೆಗಳ ವ್ಯಾಪ್ತಿಯ ಎಲ್ಲಾ ಸಂಸದರು ಮತ್ತು ಶಾಸಕರು ಗೈರಾಗಿದ್ದರು. ಇದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.