ಬೆಂಗಳೂರು : ಬೆಂಗಳೂರಿನ ಇತಿಹಾಸ ಪ್ರಸಿದ್ಧ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿದ್ದ ಚಿನ್ನಾಭಾರಣ ಕಳ್ಳತನದ ಆರೋಪ ಕೇಳಿಬಂದಿದೆ. ದಾನಿಗಳು ದ್ರೌಪದಿ ದೇವಿಗೆ ನೀಡಿದ್ದ ಆಭರಣವನ್ನ ಮುಜರಾಯಿ ಇಲಾಖೆಯ EO ನಾಗರಾಜ್ ಕದ್ದಿದ್ದಾರೆ ಎಂದು ಧರ್ಮರಾಯಸ್ವಾಮಿ ದೇಗುಲದ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಸತೀಶ್ ಆರೋಪ ಮಾಡಿದ್ದಾರೆ. ಆರ್‌ಟಿಐ ಹಾಕಿ ಪಡೆದ ಮಾಹಿತಿಯಲ್ಲಿ ಚಿನ್ನಾಭರಣವನ್ನ EO ಕೊಂಡೊಯ್ದರುವುದು ದೃಢವಾಗಿದೆ ಎನ್ನಲಾಗಿದೆ.
63 ಗ್ರಾಂ ತೂಕದ ದೇವಿಯ ಆಭರಣ ಕಳವು
ಹುಂಡಿ ಹಣ, ಚಿನ್ನಾಭರಣ ಎಣಿಕೆ ನೆಪದಲ್ಲಿ 63 ಗ್ರಾಂ ತೂಕದ ದೇವಿಯ ಆಭರಣವನ್ನ ಗುಳುಂ ಮಾಡಿದ್ದಾರೆ ಎಂದು ಧರ್ಮರಾಯಸ್ವಾಮಿ ಆಡಳಿತ ಮಂಡಳಿ ಆರೋಪ ಮಾಡಿದ್ದು, ಮುಜರಾಯಿ ಇಲಾಖೆ EO ನಾಗರಾಜ್ ಅವ್ರು ಕಾನೂನು ಉಲ್ಲಂಘಿಸಿದ್ದಾರೆ. ಹುಂಡಿ ಎಣಿಸುವಾಗ 63 ಗ್ರಾಮ್ ನೆಕ್ಲೇಸ್ ಸಿಕ್ಕಿತ್ತು. ಅದನ್ನು EO ನಾಗರಾಜ್ ಅವರು ಜೇಬಿಗೆ ಹಾಕ್ಕೊಂಡು ಹೋಗಿದ್ದಾರೆ. ಇದನ್ನು ಮುಜರಾಯಿ ಇಲಾಖೆ ಇತರೆ ಅಧಿಕಾರಿಗಳು ನನ್ನ ಗಮನಕ್ಕೆ ತಂದಿದ್ರು. ನಾನು ಆರ್‌ಟಿಐ ಹಾಕಿ ಹಾಗೂ ವಿಡಿಯೋ ಪರಿಶೀಲಿಸಿದಾಗ ವಿಚಾರ ಬಯಲಾಗಿದೆ ಎಂದು ಧರ್ಮರಾಯಸ್ವಾಮಿ ದೇಗುಲದ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಸತೀಶ್ ಹೇಳಿದ್ದಾರೆ.
ಇದಕ್ಕೆ ಸಾಕ್ಷ್ಯ ಎಂಬಂತೆ ಸಿಸಿಟಿವಿ ಫೂಟೇಜ್ ಕೂಡ ಇದೆ. ಇದನ್ನ EO ನಾಗರಾಜ್ ಒಪ್ಕೊಂಡಿದ್ದಾರೆ. ಮುಜರಾಯಿ ಇಲಾಖೆಯಲ್ಲಿ 36 ಸಾವಿರ ದೇವಸ್ಥಾನ ಇದೆ. ಇದರ ಕಾನೂನು ಪ್ರಕಾರ ದೇವಸ್ಥಾನದ ಯಾವ ಆಸ್ತಿಯೂ ದೇವಸ್ಥಾನದ ಆವರಣ ಬಿಟ್ಟು ಹೋಗೋ ಆಗಿಲ್ಲ. ಹೋದರೂ ಅದಕ್ಕೆ ಸೂಕ್ತ ಪ್ರಕ್ರಿಯೆ ಇದೆ. ಇದಾವುದನ್ನೂ ಪಾಲಿಸದೆ ಅಧಿಕಾರಿ ಜೇಬಿಗೆ ಹಾಕ್ಕೊಂಡು ಹೋಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮುಜರಾಯಿಯಲ್ಲಿ ಭಾರೀ ಭ್ರಷ್ಟಾಚಾರ
ಇನ್ನು, ಮುಜರಾಯಿ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರ ನಡೀತಿದ್ದು, ಅಧಿಕಾರಿಗಳು ಕರಗ ನಡೆಸುವಾಗ ಭಾರೀ ಹಗರಣ ಮಾಡಿದ್ದಾರೆ. ಮುಜರಾಯಿ ಇಲಾಖೆಯಲ್ಲಿ 10 ಲಕ್ಷಕ್ಕೆ 2 ಲಕ್ಷ ಕಮಿಷನ್ ಕೇಳ್ತಿದ್ದಾರೆ. ಬಿಲ್ ಮೇಲೆ 20%ನಷ್ಟು ಕಮಿಷನ್ ಗೆ ಬೇಡಿಕೆ ಇಟ್ಟಿದ್ದಾರೆ. ಹೂವಿನ ಅಲಂಕಾರ, ಲೈಟಿಂಗ್ಸ್, ಇತರೆ ವ್ಯವಸ್ಥೆ ಗುತ್ತಿಗೆ ಪಡೆದವರಿಂದ ಕಮಿಷನ್ ಕೇಳ್ತಿದ್ದಾರೆ. ಬೆಂಗಳೂರು ಕರಗೋತ್ಸವದ ಬಿಲ್ ನಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳು ಭಾರೀ ಗೋಲ್ಮಾಲ್ ಮಾಡ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಸತೀಶ್ ಆರೋಪ ಮಾಡಿದ್ದಾರೆ.
ಒಟ್ಟಿಗೆ ಆರು ಮಂದಿ ಮುಜರಾಯಿ ಇಲಾಖೆ ಅಧಿಕಾರಿಗಳ ಮೇಲೆ ಆರೋಪ ಮಾಡಲಾಗಿದ್ದು, ಆರು ಅಧಿಕಾರಿಗಳ ಹೆಸರನ್ನ ಕೂಡ ಸತೀಶ್ ಅವರು ತಿಳಿಸಿದ್ದು, ನಾಗರಾಜ್ – EO, ಅರವಿಂದ್ ಬಾಬು – ತಹಶಿಲ್ದಾರ್, ಜಗದೀಶ್ – ADC, ನವೀನ್ – EO, ಪುರಷೋತ್ತಮ್ – ಅಸಿಸ್ಟೆಂಟ್ ಕಮಿಷನರ್ ಸೇರಿ ಒಂದು ತಂಡವಾಗಿ ಭ್ರಷ್ಟಾಚಾರಕ್ಕೆ ಇಳಿದಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಇದನ್ನೂ ಓದಿ : ಹಿಂದೂ ಯುವಕನ ಜೊತೆ ಅನ್ಯಕೋಮಿನ ಯುವತಿ ಓಡಾಟ | ಅಡ್ಡಗಟ್ಟಿ ಕಿರುಕುಳ ನೀಡಿದ ಅಪ್ರಾಪ್ತರು ಪೊಲೀಸ್ ವಶಕ್ಕೆ!



















