ಬೆಂಗಳೂರು: ಪಾರ್ಕಿಂಗ್ ತೆರಿಗೆ ಕುರಿತು ಮತ್ತೊಮ್ಮೆ ಪರಿಶೀಲನೆಗೆ ಪಾಲಿಕೆ ಮುಂದಾಗಿದೆ. ಕಮರ್ಷಿಯಲ್ ಕಟ್ಟಡ ಮಾಲೀಕರ ಒತ್ತಡಕ್ಕೆ ಮಣಿದು ಕಮರ್ಷಿಯಲ್ ಕಟ್ಟಡಗಳಿಗೆ ತೆರಿಗೆ ಕಡಿಮೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದ್ದು, ಈಗ ಪರಿಶೀಲನೆಗೆ ಪಾಲಿಕೆ ಮುಂದಾಗಿದೆ.
ಸಾರ್ವಜನಿಕರ ಹಾಗೂ ವಿಪಕ್ಷ ಅಕ್ರೋಶಕ್ಕೆ ಬಿಬಿಎಂಪಿ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಪಾರ್ಕಿಂಗ್ ತೆರಿಗೆ ಪರಿಷ್ಕರಣೆ ನೆಪದಲ್ಲಿ ಜನ ಸಾಮಾನ್ಯರಿಗೆ ಬಿಬಿಎಂಪಿ ಹೊರೆ ಮಾಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಮಾಲ್, ಹೋಟೆಲ್, ಸೇರಿದಂತೆ ಇನ್ನಿತರ ಉದ್ದಿಮೆಗಳಿಗೆ ಅನುಕೂಲ ಮಾಡಿಕೊಡಲು ಕಮರ್ಷಿಯಲ್ ಕಟ್ಟಡಗಳಿಗೆ ತೆರಿಗೆ ಕಡಿಮೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಬಿಬಿಎಂಪಿ ಆಯುಕ್ತರು ಕೂಡ ಹೌದು ಎಂದು ಹೇಳಿದ್ದಾರೆ ಎನ್ನಲಾಗಿದೆ.
ಪಾರ್ಕಿಂಗ್ ತೆರಿಗೆ ಪರಿಷ್ಕರಣೆ ವೇಳೆ ಕಮರ್ಷಿಯಲ್ ಕಟ್ಟಡಗಳ ಮಾಲೀಕರು ತೆರಿಗೆ ಕಡಿಮೆ ಮಾಡಲು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಮರ್ಷಿಯಲ್ ಕಟ್ಟಡಗಳಿಗೆ ಪಾರ್ಕಿಂಗ್ ತೆರಿಗೆ ಕಡಿಮೆ ಮಾಡಲಾಗಿದೆ ಎಂದು ಆಯುಕ್ತರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.