ಇಬ್ಬರು ಸಹೋದರಿಯರನ್ನು ದುಷ್ಕರ್ಮಿಗಳು ಕಿಡ್ನಾಪ್ ಮಾಡಿ, ಅತ್ಯಾಚಾರಕ್ಕೆ ಯತ್ನಿಸಿ ಕಚ್ಚಿರುವ ಘಟನೆ ನಡೆದಿದೆ.
ಈ ವಿದ್ಯಾರ್ಥಿನಿಯರು ಅತ್ಯಾಚಾರ ಪ್ರಕರಣವನ್ನು ಖಂಡಿಸಿದ್ದರು ಎಂದು ತಿಳಿದು ಬಂದಿದೆ. ಈ ಪೈಕಿ ಓರ್ವ ವಿದ್ಯಾರ್ಥಿಗೆ ತೀವ್ರ ಗಾಯವಾಗಿದೆ. ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಇಬ್ಬರು ಸಹೋದರಿಯರನ್ನು ಹಾಡಹಗಲೇ ರಸ್ತೆಯಿಂದ ಎತ್ತಿಕೊಂಡು ಹೋಗಿ ದುಷ್ಕರ್ಮಿಗಳು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.
ಅತ್ಯಾಚಾರದ ಯತ್ನದ ವಿರುದ್ಧ ಪ್ರತಿಭಟಿಸಿದಾಗ ದುಷ್ಕರ್ಮಿಗಳು ಸಹೋದರಿಯರಿಬ್ಬರನ್ನೂ ಕೆಸರಿನಲ್ಲಿ ಎಸೆದಿದ್ದಾರೆ. ದುಷ್ಕರ್ಮಿಗಳು ವಿದ್ಯಾರ್ಥಿನಿಯರ ಬಟ್ಟೆ ಹರಿದಿದ್ದಾರೆ. ದುಷ್ಕರ್ಮಿಗಳ ಈ ಕೃತ್ಯವನ್ನು ವಿರೋಧಿಸಿ ಮತ್ತೊಬ್ಬ ಸಹೋದರಿ ಕಿರುಚಾಡಿದಾಗ ಜನ ಜಮಾಯಿಸಿದ್ದು, ಮೂವರು ದುಷ್ಕರ್ಮಿಗಳು ಬೈಕ್ ಮೂಲಕ ಪರಾರಿಯಾಗಿದ್ದಾರೆ ಎನ್ನಲಾಗಿದೆ.