ಬೆಂಗಳೂರು: ರಾಯಲ್ ಚಾಲೆಂಜರ್ಸ್ ವಿರುದ್ಧ ಕನ್ನಡಿಗ ಕೆ.ಎಲ್. ರಾಹುಲ್ ಅವರ ಸ್ಫೋಟಕ ಆಟದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆದ್ದು ಬೀಗಿದೆ. ಈಗ ಕನ್ನಡಿಗ ವಿರೋಧಿಗಳಿಗೆ ಮುಟ್ಟಿ ನೋಡಿಕೊಳ್ಳುವ ಏಟು ಕೊಟ್ಟಿದ್ದಕ್ಕೆ ಅವರ ಅಭಿಮಾನಿಗಳು ಸಂತಸ ಪಡುತ್ತಿದ್ದಾರೆ.
ಆರ್ಸಿಬಿ (RCB) ನೀಡಿದ 163 ರನ್ ಗಳ ಟಾರ್ಗೆಟ್ ಬೆನ್ನು ಹತ್ತಿದ ಡೆಲ್ಲಿ ಆರಂಭದಲ್ಲಿ ಮುಗ್ಗರಿಸಿತು. ಆದರೆ, ಕನ್ನಡಿಗ ಕೆಎಲ್ ರಾಹುಲ್ ದಿಟ್ಟ ಉತ್ತರ ನೀಡಿ ಡೆಲ್ಲಿಗೆ ಗೆಲುವು ತಂದು ಕೊಟ್ಟರು. ಕೇವಲ 53 ಬಾಲ್ ಗಳಲ್ಲಿ 93 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ತಂಡ ಗೆಲ್ಲುತ್ತಿದ್ದಂತೆ ರಾಹುಲ್ ನಡೆಸಿದ ಸೆಲೆಬ್ರೇಷನ್ ಗಮನ ಸೆಳೆದಿದೆ. ಸದ್ಯ ಈ ವಿಡಿಯೋ ಎಲ್ಲರ ಗಮನ ಸೆಳೆದಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ ಉತ್ತಮ ರನ್ ಗಳಿಸಿದರು. ಒಂದೇ ಓವರ್ನಲ್ಲಿ ಫಿಲಿಪ್ ಸಾಲ್ಟ್ 30ರನ್ ಚಚ್ಚಿ ದೊಡ್ಡ ಮೊತ್ತ ಕಲೆ ಹಾಕುವ ಸೂಚನೆ ನೀಡಿದ್ದರು. 37 ರನ್ ಗಳಿಸಿರುವಾಗ ಸಾಲ್ಟ್ ರನೌಟ್ಗೆ ಬಲಿಯಾದರು. ಆನಂತರ ಯಾವ ಬ್ಯಾಟ್ಸಮನ್ ಗಳು ಕೂಡ ಅಬ್ಬರಿಸಲಿಲ್ಲ. ಹೀಗಾಗಿ ತಂಡದ ಮೊತ್ತ 163 ರನ್ ಗಳಿಸಿತು.
ಸುಲಭ ಗುರಿ ಬೆನ್ನಟ್ಟಿದ್ದ ಡೆಲ್ಲಿಗೂ ಆರಂಭಿಕ ಆಘಾತ ಎದುರಾಗಿತ್ತು. 58 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.
ಈ ಸಂದರ್ಭದಲ್ಲಿ ರಾಹುಲ್ ತಂಡಕ್ಕೆ ಆಸರೆಯಾಗಿ ನಿಂತರು. 53 ಬಾಲ್ ಗಳನ್ನು ಎದುರಿಸಿದ ಅವರು 6 ಸಿಕ್ಸರ್ ಹಾಗೂ 7 ಬೌಂಡರಿಗಳನ್ನು ಸಿಡಿಸಿ, 175 ಸ್ಟ್ರೈಕ್ ರೇಟ್ ನೊಂದಿಗೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಡೆಲ್ಲಿ ಆಡಿರುವ ಎಲ್ಲ ಪಂದ್ಯಗಳನ್ನೂ ಗೆದ್ದಿದೆ. ಕೊನೆಗೆ ರಾಹುಲ್ ಭರ್ಜರಿ ಸೆಲೆಬ್ರೇಷನ್ ಮಾಡಿ ಗಮನ ಸೆಳೆದರು. ಕೊನೆಯ ಬಾಲ್ಗೆ ಸಿಕ್ಸ್ ಹೊಡೆದ ಅವರು, ಎರಡು ರೀತಿಯಲ್ಲಿ ಸೆಲೆಬ್ರೇಷನ್ ಮಾಡಿದ್ದಾರೆ. ‘ಇದು ನನ್ನ ಟೆರಟರಿ. ಇನ್ನೊಂದು ನಾನು ಬೆಂಗಳೂರಿಗನು. ಇಲ್ಲಿಯವನು ಎಂದು ಸಂದೇಶ ಸಾರಿದಂತೆ ಎಂದು.