ಧಾರವಾಡ : ರಸ್ತೆ ಪಕ್ಕ ಕುಳಿತಿದ್ದ ಅಜ್ಜಿಯೊಬ್ಬರನ್ನು ನೋಡಿ ತಾವೇ ಸ್ವತಃ ಅವರ ಬಳಿ ಹೋಗಿ ಮಾತನಾಡಿ ಸಚಿವ ಸಂತೋಷ್ ಲಾಡ್ ಸಮಸ್ಯೆ ಆಲಿಸಿದ್ದಾರೆ.
ಧಾರವಾಡ ಜಿಪಂ ಸಭೆಗೆ ಸಂತೋಷ್ ಲಾಡ್ ಹೊರಟಿದ್ದ ವೇಳೆ ಸರ್ಕ್ಯೂಟ್ ಹೌಸ್ ನಿಂದ ಜಿಪಂಗೆ ಹೊರಟಿದ್ದರು. ಈ ವೇಳೆ ಕಾರ್ಗಿಲ್ ಸ್ತೂಪದ ಬಳಿ ಅಜ್ಜಿ ಕುಳಿತಿದ್ದರು. ಅಜ್ಜಿಯನ್ನು ನೋಡಿದ ಕೂಡಲೇ ಸಚಿವರು ಅಜ್ಜಿ ಎದುರಿಗೆ ಮಂಡಿಯೂರಿ ಕುಳಿತು ಸಮಸ್ಯೆ ಆಲಿಸಿದ್ದಾರೆ.
ಈ ವೇಳೆ ಅಜ್ಜಿಯು ವೃದ್ಧಾಪ್ಯ ವೇತನಕ್ಕಾಗಿ ಅಲೆದಾಡುತ್ತಿರುವುದಾಗಿ ಹೇಳಿದ್ದಾರೆ. ಕೂಡಲೇ ಅಜ್ಜಿಯನ್ನು ಸ್ಥಳಕ್ಕೆ ಕರೆಯಿಸಿ, ದಾಖಲೆ ಪರಿಶೀಲಿಸಿ ಸಮಸ್ಯೆ ಬಗೆ ಹರಿಸುವಂತೆ ಸೂಚಿಸಿದ್ದಾರೆ. ಆನಂತರ ಅಜ್ಜಿಯನ್ನು ನಗಿಸಿ, ಸಚಿವರು ಅಲ್ಲಿಂದ ಕಾಲ್ಕಿತ್ತರು. ಸಚಿವರ ಸರಳತೆ ಕಂಡು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.