ಬೆಳಗಾವಿ : ಧರ್ಮಸ್ಥಳ ಪ್ರಕರಣದಲ್ಲಿ ಬುರುಡೆ ಟೀಂ ಬಗ್ಗೆ ಎಸ್ಐಟಿ ಕೋರ್ಟ್‌ಗೆ ಪ್ರಾಥಮಿಕ ತನಿಖಾ ವರದಿ ಸಲ್ಲಿಸಿದೆ. ಈ ವರದಿಯಲ್ಲಿ ಆರು ಜನ ಷಡ್ಯಂತ್ರ ರೂಪಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು, ಈ ಪ್ರಕರಣದಲ್ಲಿ ಹಿಂದೂ ಧರ್ಮದ ಭಾವನೆ ಹಾಗೂ ಧಾರ್ಮಿಕ ಭಾವನೆ ಜೊತೆಗೆ ಚೆಲ್ಲಾಟ ಆಡಿದ್ದಾರೆ. ಇವರು ಪಾತ್ರದಾರಿಗಳು ಆದರೆ ಸೂತ್ರಧಾರಿಗಳು ಸಿಎಂ ಸೂತ್ತ ಇರುವರೆ ಇದ್ದಾರೆ ಎಂದು ಹೇಳಿದ್ದಾರೆ.
ಬೆಳಗಾವಿ ಸುವರ್ಣಸೌಧದ ಎದುರು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ಈ ಸರ್ಕಾರ ಜನರ ಭಾವನೆ ಜೊತೆ ಚೆಲ್ಲಾಟ ಆಡಿದೆ. ಹಾದಿ ಬೀದಿಯಲ್ಲಿ ಹೋಗುವರ ಮಾತುಗಳನ್ನ ಕೇಳಿ ಎಸ್ಐಟಿ ರಚನೆ ಮಾಡಿದೆ. ಇದರಿಂದ ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ. ಈ ಬುರುಡೆ ಗಾಂಗ್ ಶಾಮೀಲು ಎಂಬ ವರದಿ ಬಂದಿದೆ. ಸೂತ್ರಧಾರಿಗಳು ಬೆರೆಯೇ ಇದ್ದಾರೆ. ಸೂತ್ರಧಾರಿಗಳು ಕೂಡ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಸುತ್ತಲೂ ಇದ್ದಾರೆ ಎಂದು ಜನರು ಮಾತನಾಡುತ್ತಿದ್ದಾರೆ ಎಂದಿದ್ದಾರೆ.
ಸಿಟಿ ರವಿ ಆಕ್ರೋಶ
ಅಪಪ್ರಚಾರ ಮಾಡಿದಾಗಲೇ ಹಿಂದೂ ಧರ್ಮ ಘಾಸಿಯಾಗಿದೆ ಧರ್ಮಸ್ಥಳ ವಿಚಾರ ಬಂದಾಗಲೇ ಅವತ್ತೇ ಇದು ಅಪಪ್ರಚಾರ ಮತ್ತು ಷಡ್ಯಂತ್ರ ಎಂದು ಹೇಳಿದ್ದೆ. ಈಗ ಎಸ್ಐಟಿ ಆರು ಜನ ಶಾಮೀಲು ಇದ್ದಾರೆ ಎಂದು ವರದಿ ನೀಡಿದೆ. ಷಡ್ಯಂತ್ರ ಯಾರೆ ಮಾಡಿದರು ಒಂದು ದುರುದ್ದೇಶದಿಂದ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ನಿಯೋ ಕಮ್ಯುನಿಸ್ಟ್. ನಿಷ್ಠಾವಂತ ಮಾನಸಿಕ ಮಿದುಳು ಕೆಲಸ ಮಾಡುತ್ತಿದೆ. ಅದಕ್ಕೆ ಕೆಲವರು ಗೊಬ್ಬರ ನೀರು ಹಾಕಿದ್ದೆ, ನೆರೆಯ ರಾಜ್ಯದ ಸಂಸದ ಸಹಕಾರ ಮಾಡಿದ್ದಾರೆ ಎಂದು ಆರೋಪ ಇದೆ. ಬುರಡೆ ಗ್ಯಾಂಗ್ ಹಗೆದರು ಅಷ್ಟೇ ಅಲ್ಲಿ ಏನು ಸಿಗ್ಲಿಲ್ಲ. ಸಾಮಾಜಿಕ ಅಪಪ್ರಚಾರ ನಡೆಯಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ : CCB ಪೊಲೀಸರ ಭರ್ಜರಿ ಬೇಟೆ | ಹೊಸ ವರ್ಷಕ್ಕೆ ತಂದಿದ್ದ 4.20 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ – ಮೂವರು ಪೆಡ್ಲರ್‌ಗಳ ಬಂಧನ



















