ಮೈಸೂರು: ರಾಜ್ಯದಲ್ಲಿ ಇತ್ತೀಚೆಗಷ್ಟೇ ಎಟಿಎಂ, ಬ್ಯಾಂಕ್(bank) ರಾಬರಿ ನಡೆದಿರುವ ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲೇ ರೋಡ್ ರಾಬರಿಯೊಂದು(Road Robbery) ಸದ್ದು ಮಾಡಿದೆ. ಇದನ್ನು ಕಂಡು ಜನರು ಬೆಚ್ಚಿ ಬಿದ್ದಿದ್ದಾರೆ.
ಮೈಸೂರು ಜಿಲ್ಲೆಯ ಜಯಪುರ ಹೋಬಳಿ ಹಾರೋಹಳ್ಳಿ ಹತ್ತಿರ ಖದೀಮರ ಗ್ಯಾಂಗ್ ವೊಂದು ಹಾಡ ಹಗಲೇ ರಾಬರಿ ಮಾಡಿದೆ. ಮುಸುಕುಧಾರಿ ವೇಷದಲ್ಲಿ ಕಾರು ಅಡ್ಡಗಟ್ಟಿ ರಾಬರಿ ನಡೆಸಿದ್ದಾರೆ. ಎರಡು ಕಾರಿನಲ್ಲಿ ಬಂದಿದ್ದ ನಾಲ್ವರು ಮುಸುಕುಧಾರಿಗಳು ಇನ್ನೋವಾ ಕಾರು ಅಡ್ಡಗಟ್ಟಿ ಹಣ ಹಾಗೂ ಕಾರನ್ನೂ ಕದ್ದು ಪರಾರಿಯಾಗಿದ್ದಾರೆ. ಈ ಕುರಿತು ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.