ಬೆಂಗಳೂರು: ಜಾತಿಗಣತಿ ಈಗಾಗಲೇ ರಾಜ್ಯಾದ್ಯಂತ ನಡೆಯುತ್ತಿರುವುದು ಗೊತ್ತೆ ಇದೆ. ಅಂತೆಯೇ ಅಲ್ಲೋಬ್ಬ ಸಮೀಕ್ಷೆ ನಡೆಸಲು ಮನೆಗೆ ಹೋದ ಶಿಕ್ಷಕಿಯನ್ನು ಕೂಡಿಹಾಕಿರುವ ಘಟನೆ ಕೊಡಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬುಧವಾರ ಸಂಜೆ ಕೋತಿ ಹೊಸ ಹಳ್ಳಿಯಲ್ಲಿ ಶಿಕ್ಷಕಿ ಸುಶೀಲಮ್ಮ ಗಣತಿಗಾಗಿ ಮನೆಗೆ ತೆರಳಿದ್ದರು. ಆ ಸಮಯದಲ್ಲಿ ನಾವು ಜಾತಿಗಣತಿಗೆ ಬಂದಿದ್ದೀವಿ ಐಡಿ ಕಾರ್ಡ್ ,ಆಧಾರ ಕಾರ್ಡ್ ಕೊಡಿ ಎಂದಿದ್ದಕ್ಕೆ ಮನೆಯಲ್ಲಿದ್ದವರು ಕುಪಿತಗೊಂಡು , ನೀವು ಯಾವ ಕಂಪನಿಯವರು ಇಲ್ಲಿಗೆ ಏಕೆ ಬಂದಿದ್ದೀರಾ? ನೀವು ನಿಜವಾಗಿಯೂ ಟೀಚರ್? ಎಂದು ಪ್ರಶರನೆ ಮಾಡಿ, ಗಲಾಟೆ ಮಾಡಿದ್ದಾರೆ.
ಕೊನೆಗೆ ಶಿಕ್ಷಕಿ ತಾಯಿಯ ಬಳಿ ಆಧಾರ್‌ಕಾರ್ಡ್, ವೋಟರ್ ಕಾರ್ಡ್ ನಂಬರ್ ಪಡೆದಿದ್ದರು. ಈ ವೇಳೆ ಟೀ ಶಾಪ್ ನಡೆಸುವ ಸಂದೀಪ್ ಮನೆಗೆ ಬಂದಿದ್ದಾನೆ. ಬಂದವನೇ ಜಗಳ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಮನೆಯ ಕಾಂಪೌಂಡ್ ನಲ್ಲೇ ಕೂಡಿ ಹಾಕಿದ್ದನು. ಬಳಿಕ ಸುಶೀಲಮ್ಮ ಪೊಲೀಸ್ ಕಂಟ್ರೋಲ್ ರೂಮ್ 112ಗೆ ಕರೆ ಮಾಡಿ ದೂರು ನೀಡಿದರು. ನಂತರ ಬಂದ ಪೋಲಿಸರು ಶಿಕ್ಷಕಿಯನ್ನು ರಕ್ಷಿಸಿದ್ದಾರೆ.
ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಮಾಡಿದಕ್ಕಾಗಿ ಕೊಡಗೇಹಳ್ಳಿ ಪೊಲೀಸರು ಆರೋಪಿ ಸಂದೀಪ್ ನನ್ನು ಬಂಧಿಸಿದ್ದಾರೆ.