ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿ ವಿರುದ್ಧ ಮತ್ತೊಂದು ಆರೋಪ ಮಾಡಿದ್ದಾರೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಫಿಕ್ಸಿಂಗ್ ಮಾಡಿ ಎಲೆಕ್ಷನ್ ಗೆದ್ದಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಜೆಪಿ ನೇತೃತ್ವದ NDA ಗೆಲುವಿಗೆ ಮ್ಯಾಚ್ ಫಿಕ್ಸಿಂಗ್ ಕಾರಣ ಅಂತಾ ಬಾಂಬ್ ಸಿಡಿಸಿದ್ದಾರೆ.
ತಮ್ಮದೇ ವಿಶ್ಲೇಷಣೆ ಮೂಲಕ ವಾದ ಮಂಡಿಸಿರುವ ರಾಹುಲ್ ಗಾಂಧಿ, 2019ರಲ್ಲಿ 8.98 ಕೋಟಿ ಮತದಾರರಿದ್ದರು. ಆದರೆ 2024ರ ವೇಳೆಗೆ ಆಂಖ್ಯೆ 9.29 ಕೋಟಿಗೆ ಏರಿತ್ತು. ಗೋಲ್ಮಾಲ್ ಮಾಡಿದ್ದರಿಂದ 5 ವರ್ಷದಲ್ಲಿ 31 ಲಕ್ಷ ವೋಟರ್ಸ್ ಸಂಖ್ಯೆ ಹೆಚ್ಚಾಗಿತ್ತು. 2024ರ ಮೇ ತಿಂಗಳಿನಿಂದ ನವೆಂಬರ್ ವೇಳೆಗೆ ಮ್ಯಾಜಿಕ್ ರೀತಿ 41 ಲಕ್ಷ ಮತದಾರರ ಸಂಖ್ಯೆ ಜಾಸ್ತಿಯಾಗಿತ್ತು. ಹೀಗೆ ಮಹಾರಾಷ್ಟ್ರದಲ್ಲಿ ನಕಲಿ ಮತದಾರರ ಮೂಲಕ ಎನ್ಡಿಎ ಗೆದ್ದಿದೆ ಎಂದು ರಾಹುಲ್ ಆರೋಪಿಸಿದ್ದಾರೆ.
2024ರ ನವೆಂಬರ್ನಲ್ಲಿ ಮಹಾರಾಷ್ಟ್ರದಲ್ಲಿ 5 ಹಂತದಲ್ಲಿ ಎಲೆಕ್ಷನ್ ನಡೆದಿತ್ತು. 288 ಕ್ಷೇತ್ರಗಳಲ್ಲಿ 235 ಕ್ಷೇತ್ರಗಳನ್ನು ಎನ್ಡಿಎ ಮೈತ್ರಿ ಕೂಟ ಗೆದ್ದಿತ್ತು. ಚುನಾವಣೆಯಲ್ಲಿ ಬಿಜೆಪಿ ಪಕ್ಷವೇ 132 ಕ್ಷೇತ್ರಗಳಲ್ಲಿ ಭರ್ಜರಿ ಜಯ ದಾಖಲು ಮಾಡಿತ್ತು. ಇದಕ್ಕೆಲ್ಲಾ ಈ 5 ಹಂತದ ಬಿಜೆಪಿ ಕಾರ್ಯತಂತ್ರವೇ ಕಾರಣ ಎಂದು ರಾಹುಲ್ ಆರೋಪಿಸಿದ್ದಾರೆ.