ನೆಲಮಂಗಲದಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದ್ದು ಜನರು ಬೆಚ್ಚಿ ಬಿದ್ದಿದ್ದಾರೆ.
ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದ ಸೀಗೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ನೆಲಮಂಗಲದ ಮಂಜುನಾಥ್ ಎಂಬುವವರ ತೋಟದಲ್ಲಿ ಚಿರತೆ (Leopard)ಕಾಣಿಸಿಕೊಂಡಿದ್ದು, ವ್ಯಕ್ತಿಯೊಬ್ಬನ ಮೇಲೆ ಹೊಂಚು ಹಾಕಿ ಕುಳಿತಾಗ ಪತ್ತೆಯಾಗಿದೆ. ಇದನ್ನು ಕಂಡು ಕ್ಷಣಾರ್ಧದಲ್ಲೇ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಶ್ವಾನದ ಮೇಲೆ ದಾಳಿ ಮಾಡಿದೆ.
ಮನೆಯ ಮಾಲೀಕ ಮಂಜುನಾಥ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಭಯಾನಕ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದ ಒಂದು ತಿಂಗಳ ಹಿಂದೆ ರೈತ ಮಹಿಳೆ ಮೇಲೆ ಚಿರತೆ ದಾಳಿ ಮಾಡಿತ್ತು. ಮಹಿಳೆಯ ಸಾವಿನ ನಂತರ ಅರಣ್ಯ ಇಲಾಖೆ(Forest department)) ಅಧಿಕಾರಿಗಳು ಮೂರು ಚಿರತೆಗಳನ್ನು ಸೆರೆ ಹಿಡಿದಿದ್ದರು. ಈಗ ಮತ್ತೆ ಗ್ರಾಮದ ಬಳಿ ಚಿರತೆ ಪ್ರತ್ಯಕ್ಷವಾಗಿದ್ದಕ್ಕೆ ಜನರು ಆತಂಕದಲ್ಲಿದ್ದಾರೆ. ಅಲ್ಲದೇ, ಕೂಡಲೇ ಚಿರತೆ ಸೆರೆ ಹಿಡಿಯುವಂತೆ ಮನವಿ ಮಾಡಿದ್ದಾರೆ.