ಬಾಗಲಕೋಟೆ: ಕುರಿ (sheep) ಕಳ್ಳತನಕ್ಕೆ ಯತ್ನಿಸಿದ್ದ ಖದೀಮರು ಕುರಿಗಾಹಿಯ ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಮಾ. 9ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಾದಾಮಿ ತಾಲ್ಲೂಕಿನ ಹಳಗೇರಿ ವ್ಯಾಪ್ತಿಯ ಹೊಲದಲ್ಲಿ ಈ ಘಟನೆ ನಡೆದಿದೆ. ಕುರಿ ದಡ್ಡಿಗೆ ಯಾಕುಬ್, ಸಲ್ಮಾನ್, ಸಚಿನ್ ಹೋಗಿ ಕುರಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಈ ವೇಳೆ ಶರಣಪ್ಪ ಕುರಿ ಕದ್ದೊಯ್ಯುತ್ತಿದ್ದ ಅವರನ್ನು ಹಿಡಿಯಲು ಹೋದಾಗ ಆತನ ಕೊಡಲಿಯಿಂದಲೇ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಹೀಗಾಗಿ ಈ ಘಟನೆಯಿಂದ ಆತಂಕಗೊಂಡಿರುವ ಕುರಿಗಾಹಿಗಳು ನಮಗೆ ರಕ್ಷಣೆ ನೀಡಬೇಕೆಂದು ಬಾಗಲಕೋಟೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಬಾದಾಮಿ ತಾಲ್ಲೂಕಿನ ಉಗಲವಾಟ ಗ್ರಾಮದ ಕುರಿಗಾಹಿ ಶರಣಪ್ಪ ಕೊಲೆಯಾಗಿರುವ ವ್ಯಕ್ತಿ ಎನ್ನಲಾಗಿದೆ.