ಮೈಸೂರು: ಮೂಸೂರಲ್ಲಿ “ದಿ ಕೇರಳ ಸ್ಟೋರಿ-2” ಸಿನಿಮಾದ ಕಿಚ್ಚು ಜೋರಾಗಿದ್ದು, ವಿದ್ಯಾರ್ಥಿನಿಯರಿಗೆ ಉಚಿತ ಪ್ರದರ್ಶನ ನೀಡಿ ಲವ್ ಜಿಹಾದ್ ಜಾಗೃತಿಗಾಗಿ ವಿಶೇಷ ಅಭಿಯಾನ ನಡೆಸಿದೆ.

ಮೈಸೂರಿನ DRC Mall ನಲ್ಲಿ ನಡೆದ ಸ್ಕ್ರೀನಿಂಗ್ ಅನ್ನು ವಿಷನ್ ಟೀಮ್ ಆಫ್ ಮೈಸೂರು ಆಯೋಜಿಸಿದ್ದು, ಹಿಂದೂ ಯುವತಿಯರ ರಕ್ಷಣೆಗೆ ವಿನೂತನವಾಗಿ ಕೈಗೊಂಡ ಈ ಅಭಿಯಾನದಲ್ಲಿ ಸುಮಾರು 10,000 ಯುವತಿಯರಿಗೆ ಉಚಿತ ಟಿಕೆಟ್ ವಿತರಿಸಲಾಗಿದೆ. ಮುಂದಿನ 15 ದಿನಗಳ ಕಾಲ ಈ ಉಚಿತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಪ್ರದರ್ಶನಕ್ಕೆ ಬಿಜೆಪಿ ಮುಖಂಡರಾದ ಡಾ. ಹೇಮಾನಂದೀಶ್ ನೇತೃತ್ವದಲ್ಲಿರುವ ತಂಡ ಸಹಭಾಗಿಯಾಗಿದ್ದು, ಜಯಲಕ್ಷ್ಮಿಪುರಂನ ಮಾಲ್‌ನಲ್ಲಿ ಕಾರ್ಯಕ್ರಮ ಚಾಲನೆಗೊಂಡಿತು. ಅವರ ಪ್ರಕಾರ, “ಪ್ರತಿಯೊಬ್ಬ ಹಿಂದೂ ಯುವತಿಯೂ ಈ ಚಿತ್ರವನ್ನು ನೋಡಲೇಬೇಕು” ಎಂದು ಹೇಳಿದ್ದಾರೆ.
ಹೆಮಾನಂದೀಶ್ ಅಭಿನಂದನೆ ನೀಡಿ, ರಾಜ್ಯಾದ್ಯಂತ ಜಾಗೃತಿ ಅಭಿಯಾನ ನಡೆಯಬೇಕೆಂದು, ಪ್ರತಿ ಜಿಲ್ಲೆಯಲ್ಲಿ ಉಚಿತ ಪ್ರದರ್ಶನ ನಡೆಯಬೇಕೆಂದು ಮನವಿ ಮಾಡಿದ್ದಾರೆ. ಟಿಕೆಟ್‌ಗಳಿಗಾಗಿ ಹೆಲ್ಪ್‌ಲೈನ್ ಸಂಖ್ಯೆ 99865 54557 ಮತ್ತು 9740685611 ಗೆ ಕರೆ ಮಾಡಲು ಸೂಚಿಸಲಾಗಿದೆ. ಬೆಳಿಗ್ಗೆ 10 ಗಂಟೆಯ ಪ್ರದರ್ಶನ ಮಾತ್ರ ಉಚಿತವಾಗಿದೆ.
ಇದನ್ನೂ ಓದಿ : ದರ್ಶನ್ ಪತ್ನಿಗೆ ಅಶ್ಲೀಲ ಕಾಮೆಂಟ್ ಮಾಡಿದವರಲ್ಲಿ ಸುದೀಪ್ ಫ್ಯಾನ್ಸ್?



















