ಬೆಂಗಳೂರು: ಕನ್ನಡಿಗರಿಗೆ ಗಾಯಕ ಸೋನು ನಿಗಮ್ ಅಪಮಾನ ಮಾಡಿದ ಹಿನ್ನೆಲೆಯಲ್ಲಿ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಚಿತ್ರರಂಗ ಬ್ಯಾನ್ ಮಾಡಿದೆ. ಹೀಗಾಗಿ ಬೆಂಗಳೂರು ಗ್ರಾಮಾಂತರ ಎಸ್ಪಿ ಕೂಡ ಖಡಕ್ ಸೂಚನೆ ನೀಡಿದ್ದಾರೆ.
ಇನ್ನು ಮುಂದೆ ಯಾರೇ ಕಾರ್ಯಕ್ರಮ ಮಾಡಿದರೂ ಪೊಲೀಸರ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಅನುಮತಿಯೊಂದಿಗೆ ಕೆಲವು ಸೂಚನೆ ಮತ್ತು ಮಾರ್ಗಸೂಚಿಗಳನ್ನು ಪೊಲೀಸರು ನೀಡಲಿದ್ದಾರೆ. ಯಾವುದೇ ರಾಜ್ಯದ ಗಾಯಕರು ಬಂದರೂ ಕನ್ನಡ ಹಾಡು ಕೇಳಿದರೆ, ಹಾಡಲೇಬೇಕು. ಅನಗತ್ಯವಾಗಿ ಪ್ರೇಕ್ಷಕರ ಜೊತೆ ಕಿರಿಕ್ ಮಾಡುವಂತಿಲ್ಲ. ಕನ್ನಡ ಗೀತೆ ಕೇಳಿದರೆ ಕಡ್ಡಾಯವಾಗಿ ಹಾಡಲೇಬೇಕು. ಜಾತಿ, ದೇಶ, ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡುವಂತಿಲ್ಲ. ಕನ್ನಡಕ್ಕೆ ಮೊದಲು ಪ್ರಾಮುಖ್ಯತೆ ನೀಡಲು ಪೊಲೀಸರಿಂದ ಸೂಚನೆಗೆ ನಿರ್ಧಾರ ಮಾಡಲಾಗುತ್ತದೆ.
ಈ ಎಲ್ಲ ಮಾರ್ಗಸೂಚಿಗಳು ಪರ್ಮಿಶನ್ ಪಡೆಯುವ ಸಮಯದಲ್ಲಿ ಪಾಲಿಸಲು ಸೂಚನೆ ನೀಡಲಾಗುತ್ತದೆ. ಒಂದು ವೇಳೆ ಈ ಎಲ್ಲ ಮಾರ್ಗಸೂಚಿಗಳು ಒಪ್ಪದಿದ್ದರೆ ಕಾರ್ಯಕ್ರಮಕ್ಕೆ ಅನುಮತಿ ನೀಡುವುದಿಲ್ಲ. ಸೋನು ನಿಗಮ್ ಘಟನೆ ಬಳಿಕ ಈ ಎಲ್ಲಾ ಮಾರ್ಗಸೂಚಿಗಳನ್ನು ಹೊರಡಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ.



















