ಬೆಂಗಳೂರು: ಹೆಂಡತಿ ಮತ್ತು ನಾದಿನಿ ಜೊತೆಗೆ ಸಲುಗೆಯಿಂದಿದ್ದ ವ್ಯಕ್ತಿಯನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೊಬ್ಬ ಕೊಲೆಯಾಗಿರುವ ಘಟನೆ ನಡೆದಿದೆ.
ಈ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಪ್ರಶ್ನಿಸಿದ ವ್ಯಕ್ತಿಯನ್ನು ಕಡಗದಿಂದ ಗುದ್ದಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಅಭಿಷೇಕ್ ಕೊಲೆಯಾದ ಪತಿ. ಕಾರ್ತಿಕ್ ಕೊಲೆ ಮಾಡಿರುವ ಆರೋಪಿ ಎನ್ನಲಾಗಿದೆ.
ನಿಕಿತಾ ಮತ್ತು ನಿಶ್ಚಿತಾ ಎಂಬುವವರು ಸಹೋದರಿಯರಾಗಿದ್ದರು. ಇವರನ್ನು ಅಭಿಷೇಕ್ ಮತ್ತು ಅವರ ಸಹೋದರ ಅವಿನಾಶ್ ಮದವೆಯಾಗಿದ್ದರು. ಅಭಿಷೇಕ್ ಮತ್ತು ನಿಖಿತಾ ಜೋಡಿಗೆ ಒಂದು ಮಗು ಹಾಗೂ ಅವಿನಾಶ್ ಮತ್ತು ನಿಶ್ಚಿತಾ ಜೋಡಿಗೆ ಒಂದು ಮಗು ಇತ್ತು. ಆದರೆ, ಇತ್ತೀಚೆಗೆ ಮಹಿಳೆಯರಿಬ್ಬರಿಗೂ ಕಾರ್ತಿಕ್ ಪರಿಚಯವಾಗಿದ್ದ.
ಅಕ್ಕ-ತಂಗಿಯರ ಜೊತೆ ಆತ ಸ್ನೇಹದಿಂದ ಇದ್ದ. ಈ ವಿಚಾರಕ್ಕೆ ಅಭಿಷೇಕ್ ಮತ್ತು ನಿಖಿತಾ ದಂಪತಿ ನಡುವೆ ಗಲಾಟೆ ನಡೆದು ದೂರವಾಗಿದ್ದರು. ಇನ್ನೊಂದೆಡೆ ಅವಿನಾಶ್ ಕೂಡ ತನ್ನ ಪತ್ನಿಯೊಂದಿಗೆ ಗಲಾಟೆ ಮಡಿಕೊಂಡಿದ್ದ. ಕಾರ್ತಿಕ್ ಮತ್ತು ಅಭಿಷೇಕ್ ಮಧ್ಯೆ ಹಣಕಾಸಿನ ವ್ಯವಹಾರ ಕೂಡ ನಡೆದಿತ್ತು ಎಂಬುವುದಾಗಿ ತಿಳಿದು ಬಂದಿದೆ.
ಇದೇ ವಿಚಾರವಾಗಿ ಕೊಲೆಯಾಗಿರುವ ಅಭಿಷೇಕ್ ಹಾಗೂ ಕಾರ್ತಿಕ್ ಮಧ್ಯೆ ಜಗಳ ನಡೆದಿದೆ. ಆರೋಪಿಯು ಕಡಗದಿಂದ ಹಲವು ಬಾರಿ ತಲೆಗೆ ಗುದ್ದಿ ಹಲ್ಲೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ಅಭಿಷೇಕ್ ಪತ್ನಿ ನಿಖಿತಾ, ಅವಿನಾಶ್ ಪತ್ನಿ ನಿಶ್ಚಿತ ಹಾಗೂ ಅವರ ತಾಯಿ ಮಂಜುಳಾ ಕೂಡ ಸ್ಥಳದಲ್ಲೇ ಇದ್ದು ಹಲ್ಲೆಗೆ ಉತ್ತೇಜನ ನೀಡಿದ್ದಾರೆ ಎಂದು ತಿಳಿದು ಬಂದಿದೆ. ತೀವ್ರವಾಗಿ ಹಲ್ಲೆಗೊಳಗಾದ ಅಭಿಷೇಕ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾನೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.