ಈ ಪ್ರೀತಿಗೆ ಜಾತಿ, ಧರ್ಮ, ಮೇಲು-ಕೀಳು ಸೇರಿದಂತೆ ಯಾವುದೇ ಹಂಗಿಲ್ಲ. ಅದಕ್ಕೆ ಕಾರಣವೂ ಗೊತ್ತಿಲ್ಲ. ಹೀಗೆ ಪ್ರೀತಿ ಮಾಡುವವರ ಮಧ್ಯೆ ಒಂದು ಮಾತು ಸದಾ ಕೇಳಿ ಬರುತ್ತಿರುತ್ತದೆ. ನಾವು ಪ್ರೀತಿ ಮಾಡುವವರಿಗಿಂತ ನಮ್ಮನ್ನು ಪ್ರೀತಿ ಮಾಡುವವರ ಜೊತೆ ನಾವಿರಬೇಕು ಎನ್ನುವುದು. ಈ ಮಾತು ಇಲ್ಲೊಂದು ಘಟನೆಯಲ್ಲಿ ನಿಜವಾಗಿದೆ.
ಪತ್ನಿ ಬಾಲ್ಯದ ಸ್ನೇಹಿತನನ್ನು ಪ್ರೀತಿಸುತ್ತಿದ್ದಾಳೆ ಎನ್ನುವುದು ಗೊತ್ತಾಗುತ್ತಿದ್ದಂತೆ ಪತಿಯೊಬ್ಬ, ತನ್ನ ಪತ್ನಿಯನ್ನು ಆತನಿಗೆ ಕೊಟ್ಟು ತಾನೇ ಮುಂದೆ ನಿಂತು ಮದುವೆ ಮಾಡಿಸಿದ್ದಾನೆ. ಅಲ್ಲದೇ, ತಮ್ಮಿಬ್ಬರಿಗೆ ಹುಟ್ಟಿದ ಎರಡು ವರ್ಷದ ಮಗುವನ್ನು ಕೂಡ ತಾನೇ ಬೆಳೆಸುವ ಜವಾಬ್ದಾರಿ ಕೂಡ ಹೊತ್ತಿದ್ದಾನೆ.
ಈ ಘಟನೆ ಬಿಹಾರ (Bihar) ದ ಲಖಿಸರೈನಲ್ಲಿ ಈ ಘಟನೆ ನಡೆದಿದೆ. ಜುಲೈ 30ರಂದು ಖುಷ್ಬೂ ನೋಡಲು ಚಂದನ್ ಆಕೆಯ ಮನೆಗೆ ಬಂದಿದ್ದ. ಈ ಸಂದರ್ಭದಲ್ಲಿ ಖುಷ್ಬೂ ಪತಿ ಹಾಗೂ ಆತನ ಕುಟುಂಬಸ್ಥರು ಮನೆಯಲ್ಲಿದ್ದರು. ಖುಷ್ಬೂ ಹಾಗೂ ಚಂದನ್ ರನ್ನು ಕುಟುಂಬಸ್ಥರು ರೆಡ್ ಹ್ಯಾಂಡ್ ಆಗಿ ಹಿಡಿದಿದಿದ್ದರೆ, ಖುಷ್ಬೂ ಪತಿ ರಾಜೇಶ್, ಪತ್ನಿ ಹಾಗೂ ಚಂದನ್ ಗೆ ಮದುವೆ ಮಾಡುವ ನಿರ್ಧಾರಕ್ಕೆ ಬಂದಿದ್ದಾನೆ. ಈ ವೇಳೆಯೇ ಎಲ್ಲರ ಸಮ್ಮುಖದಲ್ಲಿ ಖುಷ್ಬೂ ಹಾಗೂ ಚಂದನ್ ಮದುವೆ ಮಾಡಲಾಗಿದೆ.
ಚಂದನ್ ಹಾಗೂ ಖುಷ್ಬೂ ಇಬ್ಬರೂ ಒಂದೇ ಊರಿನ ವ್ಯಕ್ತಿ. ಇಬ್ಬರೂ ಬಾಲ್ಯದಿಂದಲೂ ಸ್ನೇಹಿತರು. ದೊಡ್ಡವರಾಗುತ್ತಿದ್ದಂತೆ ಇಬ್ಬರ ಮಧ್ಯೆ ಪ್ರೀತಿ ಬೆಳೆದಿದೆ. ಚಂದನ್ ಹಾಗೂ ಖುಷ್ಬೂ ಪ್ರೀತಿಸುತ್ತಿದ್ದ ವಿಷಯ ಮನೆಯವರಿಗೆ ತಿಳಿದಿತ್ತು. ಆದರೆ, ಖುಷ್ಬೂ ತಾಯಿ ಹಾಗೂ ಮಾವ, ಇವರಿಬ್ಬರ ಮದುವೆಗೆ ಒಪ್ಪಲಿಲ್ಲ. ಹೀಗಾಗಿ ಕಳೆದ ಮೂರು ವರ್ಷಗಳ ಹಿಂದೆ ಖುಷ್ಬೂನನ್ನು ರಾಜೇಶ್ ಗೆ ಕೊಟ್ಟು ಮದುವೆ ಮಾಡಿದ್ದರು.
ರಾಜೇಶ್ ಹಾಗೂ ಖುಷ್ಬೂಗೆ ಎರಡು ವರ್ಷದ ಒಂದು ಗಂಡು ಮಗುವಿದೆ. ಮದುವೆ ನಂತ್ರವೂ ಖುಷ್ಬೂ ಹಾಗೂ ಚಂದನ್ ಭೇಟಿಯಾಗುತ್ತಿದ್ದರು. ಇಬ್ಬರ ಮಧ್ಯೆ ಫೋನ್ ನಲ್ಲಿಯೇ ಮಾತುಕತೆ ನಡೆಯುತ್ತಿತ್ತು. ಜುಲೈ 30ರಂದು ಇಬ್ಬರ ಪ್ರೇಮ ಪ್ರಸಂಗ ಬಹಿರಂಗವಾಗಿದೆ. ಬಾಲ್ಯದ ಪ್ರೇಮಿಯನ್ನು ಮದುವೆ ಆಗಿರುವ ಚಂದನ್ ಖುಷಿಯಾಗಿದ್ದಾನೆ. ಖುಷ್ಬೂಳನ್ನು ಮದುವೆಯಾಗಿದ್ದು ಸಂತೋಷ ನೀಡಿದೆ. ಮಗನನ್ನು ಬಿಟ್ಟು ಹೋಗುವ ನೋವಿದೆ. ಮಗನನ್ನು ಬಿಟ್ಟು ಬದುಕುವುದು ಕಷ್ಟ ಎಂದು ಖುಷ್ಬೂ ಹೇಳಿದ್ದಾಳೆ.
ಈ ವಿಷಯವಾಗಿ ಪತಿ ಮಾತನಾಡಿದ್ದು, ಖುಷ್ಬೂ ಫೋನಿನಲ್ಲಿ ದೀರ್ಘ ಸಮಯ ಮಾತನಾಡ್ತಿದ್ದಳು. ಯಾರು ಅಂತ ಕೇಳಿದ್ರೆ ಅಮ್ಮ ಎನ್ನುತ್ತಿದ್ದಳು. ಈ ಬಗ್ಗೆ ವಿಚಾರಿಸಿದಾಗ ಚಂದನ್ ಬಗ್ಗೆ ತಿಳಿಯಿತು. ಅನೇಕ ಬಾರಿ ನಾನು ಮೊಬೈಲ್ ಒಡೆದು ಹಾಕುವ ಪ್ರಯತ್ನ ನಡೆಸಿದ್ದೆ. ನಂತರ ಇಬ್ಬರನ್ನೂ ಒಂದು ಮಾಡುವುದು ಸೂಕ್ತ ಅನಿಸಿತು ಎಂದು ಹೇಳಿದ್ದಾರೆ.

















